ಬಾಲಿವುಡ್ ನಟ ನೇಣಿಗೆ ಶರಣು- ಕಣ್ಣೀರಾದ ಕಲಾವಿದರು

ಧರ್ಮಶಾಲಾ: ಖಾಸಗಿ ಬಂಗ್ಲೆಯಲ್ಲಿ ಬಾಲಿವುಡ್ ನಟ ಆಸೀಫ್ ಬಾಸ್ರಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಹಿಮಾಚಲಪ್ರದೇಶದಲ್ಲಿ ನಡೆದಿರುವ ಘಟನೆಯಿಂದ ಬಾಲಿವುಡ್ ಮತ್ತಷ್ಟು ಹೈರಾಣಾಗಾಗಿದೆ.
ಧರ್ಮಶಾಲಾದ ಮೆಕ್ ಲೊಡ್ ಗಂಜ್ ನಲ್ಲಿ ಗುರುವಾರ ಬಸ್ರಾ ಎಫ್ ಸಿ ಗಿಬಾಡಾ ರಸ್ತೆಯಲ್ಲಿರುವ ಕೆಫೆಯ ಬಳಿಯಿರುವ ಕಾಂಪ್ಲೇಕ್ಸನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾಗಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಘಟನೆ ವರದಿಯಾಗುತ್ತಿದ್ದಂತೆಯೇ ಪೊಲೀಸರ ತಂಡವೂ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.
53 ವರ್ಷದ ಬಸ್ರಾ, ಕಳೆದ 5 ವರ್ಷಗಳಿಂದ ಮೆಕ್ ಲಿಯೋಡ್ ಗಂಜ್ ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಬಹುಭಾಷಾ ನಟರಾದ ಆಸಿಫ್, ಮುಖ್ಯವಾಗಿ ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
ಆಸೀಫ ಬಸ್ರಾ ಸಾವಿಗೆ ಚಿತ್ರರಂಗದ ಹಲವರು ಅಚ್ಚರಿವ್ಯಕ್ತಪಡಿಸಿದ್ದಾರೆ. ಪ್ರತಿಭಾವಂತ ನಟನನ್ನ ಈ ಥರ ಕಳೆದುಕೊಂಡಿರುವುದು ಬೇಸರ ವಿಷಯ ಎಂದಿದ್ದಾರೆ. ಸಾವಿಗೀಡಾಗಿರುವ ನಟನ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ ಎಸ್ ಪಿ ವಿಮುಕ್ತ ರಂಜನ್ ತಿಳಿಸಿದ್ದಾರೆ.