ಎಲ್ಲೂ ಸುದ್ದಿಯಾಗದ ಧಾರವಾಡದ ಅಮರ ಪ್ರೇಮ ಕಹಾನಿ ಮತ್ತು ಎರಡು ಸಾವುಗಳು….!!!

ಧಾರವಾಡ: ಅವರಿಬ್ಬರೂ ಒಬ್ಬರ ಮೇಲೆ ಒಬ್ಬರು ಜೀವವಿಟ್ಟುಕೊಂಡು ಬದುಕುತ್ತಿದ್ದರು. ಈ ಜೀವನದಲ್ಲಿ ಅವಳಿಗೆ ಆತ, ಆತನಿಗೆ ಅವಳು ಎಂಬಂತೆ ದಿನವೂ ಭೇಟಿಯಾಗಿ ಕ್ಷಣಗಳನ್ನ ಕಳೆದು, ದೂರದ ಕನಸು ಕಾಣುತ್ತಿದ್ದರು.
ಇಬ್ಬರಿಗೂ ಹದಿಹರೆಯದ ವಯಸ್ಸು ಈ ವರ್ಷವೊಂದು ಮುಗಿದು ಹೋದರೇ, ಆಕೆಗೂ ಮದುವೆ ವಯಸ್ಸು. ಈ ಹುಡುಗ ಅದಾಗಲೇ ಯುವಕನಾಗಿ ಆಕೆಯ ತುಂಬುವ ದಿನಗಳಿಗೆ ಕಾಣುತ್ತಿದ್ದ.
ಧಾರವಾಡದ ಮದಾರಮಡ್ಡಿಯಿಂದ ಆರಂಭವಾಗುತ್ತಿದ್ದ ಆ ಅಮರ ಪ್ರೇಮಿಗಳ ಹೆಜ್ಜೆಗಳು ವಿದ್ಯಾಕಾಶಿಯ ಸುಭಾಸ ರಸ್ತೆಯಲ್ಲಿ ಕಂಡು ಬರುತ್ತಿದ್ದವು. ಒಮ್ಮೊಮ್ಮೆ ಎಲ್‌ಇಎ ಕ್ಯಾಂಟಿನ್ ಅಂಗಳದಲ್ಲಿ ನಕ್ಕು ಒಬ್ಬರಿಗೊಬ್ಬರು ಸೇರುವ ದಿನಗಳ ಬಗ್ಗೆ ಕನಸು ಕಾಣುತ್ತ ಅವರವರ ಮನೆಗೆ ಹೋಗ್ತಿದ್ದರು.
ಇಬ್ಬರು ಎಂದಿನಂತೆ ಬೆಳಿಗ್ಗೆ ಸಿಗೋಣ ಎಂದುಕೊಂಡು ಮನೆಗೆ ಹೋಗಿ ಮರಳಿ ಸಿಗಲು ಬಂದಾಗ, ಅದೇ ಅವರಿಬ್ಬರ ಕೊನೆಯ ಕ್ಷಣಗಳು ಎಂಬುದು ಅವರಿಗೆ ಗೊತ್ತಾಗಲೇ ಇಲ್ಲ. ಆಕೆ ತನ್ನ ಕಾಲೇಜಿನ ಅಂಗಳದಲ್ಲಿಯೇ ವಿಷ ಕುಡಿದು ಉಸಿರು ನಿಲ್ಲಿಸಿಬಿಟ್ಟಳು. ಅಯ್ಯೋ… ದೇವರೇ, ಅವಳಿಲ್ಲದೇ ನಾನು ಹೇಗೆ ಬದುಕಲಿ ಎಂದುಕೊಂಡು ಮನೆಗೆ ಹೋಗಿ ಆತನೂ ಪ್ರಾಣಬಿಟ್ಟ.
ಈ ಪ್ರಕರಣ ಎಲ್ಲಿಯೂ ಸುದ್ದಿಯಾಗಲೇ ಇಲ್ಲ. ಎರಡು ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿ, ಮುಗಿದು ಹೋದವು… ಅವರಿಬ್ವರ ಪ್ರೇಮದಂತೆ….