ಕುರುಬ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡಿ: ಬಾಳು ತೇರದಾಳ ಒತ್ತಾಯ.

ಬೆಳಗಾವಿ: ರಾಜ್ಯ ರಾಜಕೀಯ ಅಖಾಡದಲ್ಲಿ ಕುರುಬ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡಬೇಕು. ಬಿಜೆಪಿ ಸರ್ಕಾರ ಒಂದು ಕಣ್ಣಿಗೆ ಸುಣ್ಣ ಇನೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆ ಎಂದು ಜಿಲ್ಲೆಯ ಸಂಘಟನೆಯ ಉಪಾಧ್ಯಕ್ಷ ಬಾಳು ತೇರದಾಳ ಆಕ್ರೋಶವ್ಯಪಡಿಸಿದ್ದಾರೆ.
ಕುರುಬರ ಸಮುದಾಯದ ಬಿಜೆಪಿ ಪಕ್ಷದ ಹಿರಿಯ ಮುಂಖಂಡರು ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು . ಸಚಿವ ಸಂಪುಟ ಮಾಡುವದರಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆಯುವಲ್ಲಿ ಎಡವಿದ್ದಾರೆ ಎಂದರು.
ಹಿರಿಯ ಶಾಸಕ ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರರನ್ನ ಸಚಿವರನ್ನಾಗಿ ಮಾಡಿ. ಕುರುಬರ ಸಮುದಾಯದ ಹಳ್ಳಿ ಎಂದು ಬಿರುದು ಪಡೆದ ಎಚ್.ವಿಶ್ವನಾಥ ಅವರ ಜೊತೆಗೆ ಇವರನ್ನು ಸಚಿವರನ್ನಾಗಿ ಮಾಡಿ ಎಂದು ಸಂಗೋಳ್ಳಿ ರಾಯಣ್ಣ ಸ್ಮಾರಕ ಪ್ರಾಧಿಕಾರದ ಹೊರಾಟ ರಚನಾ ಸಮಿತಿ ಕಛೇರಿಯಲ್ಲಿ ಬೆಳಗಾವಿ ಜಿಲ್ಲೆಯ ಸಂಘಟನೆ ಉಪಾಧ್ಯಕ್ಷ ಬಾಳು ತೇರದಾಳ ಒತ್ತಾಯಿಸಿದ್ದಾರೆ.