ಬೆಂಗಳೂರು ಕೆಐಡಿಬಿ ಅಧಿಕಾರಿಯ ಹುಬ್ಬಳ್ಳಿ ಮನೆ ಮೇಲೆ ಎಸಿಬಿ ದಾಳಿ
1 min readಹುಬ್ಬಳ್ಳಿ: ಬೆಂಗಳೂರಿನ ಕೆಐಡಿಬಿಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿರುವ ಅಧಿಕಾರಿಯ ಮನೆ ಮೇಲೆ ರಾಜಧಾನಿ ಮತ್ತು ಹುಬ್ಬಳ್ಳಿಯಲ್ಲಿ ಏಕಕಾಲಕ್ಕೆ ದಾಳಿ ನಡೆದಿದ್ದು, ತನಿಖೆ ಬೆಳಿಗ್ಗೆಯಿಂದಲೇ ಮುಂದುವರೆದಿದೆ.
ಧಾರವಾಡ ಎಸಿಬಿ ಅಧಿಕಾರಿಗಳಿಂದ ದಾಳಿಯಾಗಿದ್ದು ಹುಬ್ಬಳ್ಳಿ ಹೆಗ್ಗೇರಿಯ ಕೋಟಿಲಿಂಗನಗರದಲ್ಲಿರೋ ಮನೆ ಹಾಗೂ ಇನ್ನಿತರ ಕಡೆ ದಾಳಿ ನಡೆದಿದೆ.
ಕೆಐಡಿಬಿ ಸಹಾಯಕ ಕಾರ್ಯದರ್ಶಿ ಹರೀಶ್ ಹಳೇಪೇಟೆ ಎಂಬುವವರ ಮನೆಯಲ್ಲಿ ತನಿಖೆ ಮುಂದುವರೆದಿದೆ. ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಏಕಕಾಲಕ್ಕೆ ತನಿಖೆ ನಡೆದಿದ್ದು, ಹರಿಲಕ್ಷ್ಮೀ ನಿಲಯದಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಹರೀಶ ಹಳೇಪೇಟೆಯವರ ಯಾವ ಪ್ರಕರಣದ ಮೇಲೆ ದಾಳಿ ನಡೆದಿದೆ ಎಂದು ನಿಖರವಾಗಿ ಗೊತ್ತಾಗಿಲ್ಲವಾದರೂ, ಬೆಳ್ಳಂಬೆಳಿಗ್ಗೆಯೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ.