Posts Slider

Karnataka Voice

Latest Kannada News

ಹುಬ್ಬಳ್ಳಿ ಮೇದಾರ ಓಣಿ ಶಾಶ್ವತ ಶುಚಿತ್ವ- ಮಹಾನಗರ ಪಾಲಿಕೆಗೆ ಎಎಪಿ ಒತ್ತಾಯ

1 min read
Spread the love

ಹುಬ್ಬಳ್ಳಿ: ನಗರದ ಹೃದಯ ಭಾಗವಾದ ಬ್ರಾಡ್ ವೇ, ಮ್ಯಾದಾರ ಓಣಿಯಲ್ಲಿ ಶುಚಿತ್ವ ದೋಷ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ತಂಡ ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ಕಾರ್ಯ ನಡೆಸಿತು.

ಮೇದಾರ ಓಣಿ, ಮನಿಯಾರ್ ಕಾಂಪ್ಲೆಕ್ಸ, ಮತ್ತು ಬ್ರಾಡ್ ವೇ ಬಳಿಯ ನಾರಾಯಣ ಚೌಕ್ ಸುತ್ತುಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ, ಆ ಪ್ರದೇಶದ ನಿವಾಸಿಗಳು ಮತ್ತು ಅಂಗಡಿಗಳ ಮಾಲೀಕರೊಂದಿಗೆ ಮಾತನಾಡಿದರು.

ಹುಬ್ಬಳ್ಳಿ ಮಹಾನಗರದ ಹೃದಯಭಾಗದಲ್ಲಿರುವ ಈ ಭಾಗ ಶುಚಿತ್ವದಿಂದ ವಂಚಿತಗೊಂಡು ಅಸಹನೀಯವಾಗಿದೆ. ಇಲ್ಲಿನ ಸಾರ್ವಜನಿಕ ಶೌಚಾಲಯಗಳು, ಮೂತ್ರಾಲಯಗಳು ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳಿಗೆ ಒದಗಿಸುವ ಸೇವೆ ಸಂಪೂರ್ಣ ಅಮಾನವೀಯ. ಇಲ್ಲಿನ ಪರಿಸ್ಥಿತಿಗಳನ್ನು ನೋಡಿದಾಗ ಸ್ಮಾರ್ಟ್ ಸಿಟಿ ಮತ್ತು ಸ್ವಚ್ಛ ಭಾರತದಂತಹ ದೊಡ್ಡ-ದೊಡ್ಡ ಮಾತುಗಳು, ಕೇವಲ ಟೊಳ್ಳಾದ ಘೋಷಣೆಗಳಾಗಿ ಉಳಿದಂತಾಗುತ್ತವೆ. ಇಲ್ಲಿ ಸರಿಯಾದ ದೀಪ, ನೀರಿನ ವ್ಯವಸ್ಥೆ ಇಲ್ಲ. ಶುಚಿತ್ವ ಎನ್ನುವುದು ಕನಸಿನ ಮಾತಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ಚೆಲ್ಲಾಪಿಲ್ಲಿಯಾಗಿದೆ.  ಹೇಳುವವರಿಲ್ಲ, ಕೇಳವವರಿಲ್ಲ, ಮೂಗು ಮುಚ್ಚಿಕೊಂಡು ಓಡಾಡದೆ ಜನರಿಗೆ ಬೇರೆ ಗತಿಯಿಲ್ಲ ಎಂಬಂತಾಗಿದೆ. ಈ ಪರಿಸ್ಥಿತಿ ಕಳೆದ 20 ವರ್ಷಗಳಿಗಿಂತ ಹೆಚ್ಚು ಹೀಗೆ ಇದ್ದರು ಮಹಾನಗರ ಪಾಲಿಕೆಯಿಂದ ನಿರ್ವಹಣೆನೂ ಇಲ್ಲ, ದುರಸ್ತಿನೂ ಇಲ್ಲ ಎಂದು ಸ್ಥಳೀಯರ ಹೇಳಿಕೆಯಾಗಿದೆ.

ಇಲ್ಲಿಯ ಪರಿಸ್ಥಿತಿ, ಒಂದು ಹಳ್ಳಿಗಿಂತ ಕೆಟ್ಟದಾಗಿದೆ. ಕೂಡಲೇ ಮಹಾನಗರ ಪಾಲಿಕೆ ಅದ್ವಾನಕ್ಕೆ ಕಾರಣವಾದ ಕಸದ ತೊಟ್ಟಿಯನ್ನು ಶಾಶ್ವತವಾಗಿ ತೆಗೆಯುವುದು, ಶೌಚಾಲಯ ದುರಸ್ತಿ ಕಾರ್ಯ ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ. ‌‌ಈ ಸಂದರ್ಭದಲ್ಲಿ  ಪೂರ್ವ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಅನಂತಕುಮಾರ ಭಾರತೀಯ, ಸ್ಥಳೀಯ ಪದಾಧಿಕಾರಿಗಳಾದ ನವೀನ ಸಿಂಗ್ ರಜಪೂತ, ಲತಾ ಅಂಗಡಿ, ಪ್ರಶಾಂತ ಹುಲಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *