Posts Slider

Karnataka Voice

Latest Kannada News

ಆಪ್ ವಿದ್ಯಾರ್ಥಿ ಘಟಕದ ಸಂಘಟನಾ ಕಾರ್ಯದರ್ಶಿಗಳ ಆಯ್ಕೆ

1 min read
Spread the love

ಹುಬ್ಬಳ್ಳಿ: ಮೊಹಮ್ಮದ್ ಅರಾಫತ್ ಪೀರಜಾದೆ ಅವರನ್ನು ಆಮ್ ಆದ್ಮಿ ಪಕ್ಷದ ಧಾರವಾಡ ನಗರದ ವಿದ್ಯಾರ್ಥಿ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ, ಅಭಿಷೇಕ ದಲ್ವಾ ಅವರನ್ನು ಜಂಟಿ ಕಾರ್ಯದರ್ಶಿಯನ್ನಾಗಿ ಪಕ್ಷದ ಜಿಲ್ಲಾಧ್ಯಕ್ಷರು ನೇಮಕ ಮಾಡಿ ಆದೇಶ ಪತ್ರ ಹಸ್ತಾಂತರ ಮಾಡಿದರು.

ಬಿಬಿಎ ಪದವೀಧರರಾಗಿರುವ ಮೊಹಮ್ಮದ್ ಕೆ.ಎಲ್.ಇ ಸೊಸೈಟಿಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಅಗತ್ಯ ಬೆಂಬಲ ಮತ್ತು ಯಶಸ್ವಿಯಾಗಲು ಅವಕಾಶಗಳನ್ನು ಖಾತರಿಪಡಿಸುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯ ಕನಸನ್ನು ನನಸಾಗಿಸುವುದು ಕನಸು ಹೊಂದಿದ್ದಾರೆ. ಶ್ರೀ ಅರವಿಂದ ಕೇಜ್ರಿವಾಲ ಅವರ ನೇತೃತ್ವದಲ್ಲಿ ದೆಹಲಿ ಮಾದರಿ ಉತ್ತಮ ಆಡಳಿತದಿಂದ ಅವರು ಸ್ಫೂರ್ತಿ ಪಡೆದಿದ್ದಾರೆ. ಕ್ರೀಡಾ ವಿಶ್ವವಿದ್ಯಾಲಯ, ಕೌಶಲ್ಯ ವಿಶ್ವವಿದ್ಯಾಲಯ, ಉದ್ಯಮಶೀಲತೆ ಪಠ್ಯಕ್ರಮ (ಇ.ಎಂ.ಸಿ.), ವಿಶ್ವ ದರ್ಜೆಯ ಸರ್ಕಾರಿ ಶಾಲಾ ಮೂಲಸೌಕರ್ಯ ಮತ್ತು ಎಎಪಿ ಸರಕಾರದ ಇಂತಹ ಅನೇಕ ವಿದ್ಯಾರ್ಥಿ ಪರ ಮತ್ತು ಯುವ ಪರ ನೀತಿಗಳು, ರಾಷ್ಟ್ರ ನಿರ್ಮಾಣದ ಧ್ಯೇಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪುವ ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವರಿಗೆ ಪ್ರೇರಣೆ ನೀಡಿವೆ.

ಪಕ್ಷದ ಧಾರವಾಡ ಜಿಲ್ಲಾಧ್ಯಕ್ಷ ಶ್ರೀ ಸಂತೋಷ ನರಗುಂದ, ಆದೇಶ ಪತ್ರ ನೀಡಿ, ಕಷ್ಟದ ಸಮಯದಲ್ಲಿ ಕರ್ನಾಟಕದ  ವಿದ್ಯಾರ್ಥಿಗಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಬಲವಾದ ಧ್ವನಿ ನೀಡುವಂತೆ ಪ್ರೋತ್ಸಾಹಿಸಿದರು.


Spread the love

Leave a Reply

Your email address will not be published. Required fields are marked *

You may have missed