ಹುಬ್ಬಳ್ಳಿಯಲ್ಲಿ ಖೋಟಾ ನೋಟು…!
1 min readಹುಬ್ಬಳ್ಳಿ: ನಗರದಲ್ಲಿ 500 ಮತ್ತು 100 ರೂಪಾಯಿ ಮುಖ ಬೆಲೆಯ ಖೋಟಾನೋಟುಗಳನ್ನ ಪ್ರಿಂಟ್ ಮಾಡಿ ಅಸಲಿ 8 ಸಾವಿರಕ್ಕೆ ನಕಲಿ 10 ಸಾವಿರ ರೂಪಾಯಿ ಕೊಡುತ್ತಿದ್ದ ತಂಡವನ್ನ ಬಂಧನ ಮಾಡುವಲ್ಲಿ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನ ಹುಬ್ಬಳ್ಳಿ ಮೂರುಸಾವಿರ ಮಠದ ಹಿಂಭಾಗದ ಗುರುಶಿದ್ದೇಶ್ವರನಗರದ ಗೋಪಿನಾಥ ಹಬೀಬ, ಟಿಪ್ಪುನಗರ ಮಾಳೇಕಾರ ಪ್ಲಾಟನ ಶ್ರೀನಿವಾಸ ವಾಸಪ್ಪ ತಟ್ಟಿ, ದೇವರಗುಡಿಹಾಳದ ಮೌಲಾಸಾಬ ಮಕ್ತುಮಸಾಬ ಗುಡಿಹಾಳ ಹಾಗೂ ಹಳೇಹುಬ್ಬಳ್ಳಿ ಸದರಸೋಫಾ ಕೋಳೇಕರ ಪ್ಲಾಟನ ಸಲೀಂ ಇಮಾಮಸಾಬ ಮುಲ್ಲಾ ಎಂದು ಗುರುತಿಸಲಾಗಿದೆ.
ಬಂಧಿತ ಗೋಪಿನಾಥ ಹಬೀಬ ನೋಟನ್ನ ಪ್ರಿಂಟ್ ಮಾಡಿ ಇನ್ನುಳಿದ ಆರೋಪಿಗಳಿಗೆ ಮಾರಾಟ ಮಾಡಲು ಹಚ್ಚುತ್ತಿದ್ದ ಸಮಯದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ಆರೋಪಿಗಳಿಂದ 66500 ರೂಪಾಯಿ ಖೋಟಾ ನೋಟುಗಳನ್ನ ಹಾಗೂ ವಿವಿಧ ಕಂಪನಿಯ 4 ಮೊಬೈಲ್ ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಕಮೀಷನರ್ ಲಾಬುರಾಮ್ ಮಾರ್ಗದರ್ಶನದಲ್ಲಿ ಕೇಶ್ವಾಪುರ ಠಾಣೆ ಇನ್ಸಪೆಕ್ಟರ್ ಸುರೇಶ ಕುಂಬಾರ, ಸಿಬ್ಬಂದಿಗಳಾದ ಎಂ.ಡಿ.ಕಾಲವಾಡ, ಆರ್.ಎಲ್.ರಾಠೋಡ, ವಿ.ಎ.ಅಳಗವಾಡಿ, ಎಚ್.ಆರ್.ರಾಮಾಪೂರ, ಎಸ್.ಡಿ.ಗೌಡರ ಆರೋಪಿಗಳನ್ನ ಝಡಪಿ ರಸ್ತೆಯ ಚರ್ಚ ಬಳಿ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.