ಎಸ್.ಬಿ.ಗಾಮನಗಟ್ಟಿ ಸರ್ ಇನ್ನಿಲ್ಲ..!
1 min readಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸದಸ್ಯರಾಗಿದ್ದ ಎಸ್.ಬಿ. ಗಾಮನಗಟ್ಟಿ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನರಾದರು.
ಧಾರವಾಡದ ಆರ್.ಎನ್.ಶೆಟ್ಟಿ ಮೈದಾನದ ಬಳಿಯಿರುವ ಮನೆಯೆದುರು ಅರಾಮಾಗಿ ನಿಂತಿದ್ದ ಅವರು, ಸಡನ್ನಾಗಿ ಕೆಳಗೆ ಕುಸಿದು ಬಿದ್ದಿದ್ದಾರೆ. ಅಷ್ಟರಲ್ಲಿ ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಗಾಮನಗಟ್ಟಿಯವರು ಮೃತರಾಗಿದ್ದಾರೆ.
ಶಿಕ್ಷಣ ಇಲಾಖೆಯ ಪ್ರಮುಖ ಜವಾಬ್ದಾರಿಗಳನ್ನ ನಿಭಾಯಿಸಿದ ನಂತರ ನಿರಂತರ ಚಟುವಟಿಕೆಯಲ್ಲಿರುತ್ತಿದ್ದ ಗಾಮನಗಟ್ಟಿಯವರು ನಿಧನ, ಶಿಕ್ಷಣ ಇಲಾಖೆ ಹಾಗೂ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಅಕಾಲಿಕವಾದ ನಿಧನರಾದ ಎಸ್.ಬಿ.ಗಾಮನಗಟ್ಟಿಯವರ ನಿಧನಕ್ಕೆ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ರಾಜ್ಯ ಗೌರವಾಧ್ಯಕ್ಷ ಎಲ್. ಐ. ಲಕ್ಕಮ್ಮನವರ, ಕೋಶಾಧಿಕಾರಿ ಎಸ್.ಎಫ್. ಪಾಟೀಲ, ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾಯಿ ಮುಂತಾದವರು ತೀವ್ರ ಸಂತಾಪ ಸೂಚಿಸಿದ್ದಾರೆ.