Posts Slider

Karnataka Voice

Latest Kannada News

65 ನೇ ರಾಜ್ಯೋತ್ಸವಕ್ಕೆ 65 ಸಾಧಕರಿಗೆ ಪ್ರಶಸ್ತಿ- ಆಯ್ಕೆ ಗೊಂದಲಕ್ಕೆ ತೆರೆ

1 min read
Spread the love

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳನ್ನ ಕೊಡಬೇಕೋ ಬೇಡವೋ ಎನ್ನುವ ಜಿಜ್ಞಾಸೆಗಳ ನಡುವೆಯೇ ಸರಕಾರ 65 ಸಾಧಕರಿಗೆ ಪ್ರಶಸ್ತಿಯನ್ನ ಪ್ರಕಟಿಸಿದೆ. ಈ ಕುರಿತು ಸಚಿವ ಸಿ.ಟಿ.ರವಿ ಮಾಹಿತಿ ನೀಡಿದರು. 26 ವಿವಿಧ ಕ್ಷೇತ್ರಗಳನ್ನ ಗುರುತಿಸಿಲಾಗಿದೆ.. ಪ್ರತಿ ಜಿಲ್ಲೆಗೂ ಒಂದಾದರು ರಾಜ್ಯೋತ್ಸವ ಪ್ರಶಸ್ತಿ ಇರಬೇಕು ಎಂದಿದೆ ಅದು ಪರಿಗಣಿಸಿದೆ.

ಸಂಗೀತ ಕ್ಷೇತ್ರ

ಹಂಬಯ್ಯ ನೂಲಿ, ರಾಯಚೂರು

ಅನಂತ ತೇರದಾಳ, ಬೆಳಗಾವಿ

ಬಿ.ವಿ ಶ್ರೀನಿವಾಸ್ , ಬೆಂಗಳೂರು ನಗರ

ಗಿರಿಜಾ ನಾರಾಯಣ , ಬೆಂಗಳೂರು ನಗರ

ಕೆ ಲಿಂಗಪ್ಪ ಶೇರಿಗಾರ ಕಟೀಲ ದಕ್ಷಿಣ ಕನ್ನಡ

ಸಾಹಿತ್ಯ ಕ್ಷೇತ್ರ

ಪ್ರೋ ಸಿಪಿ ಸಿದ್ದಾಶ್ರಮ ಧಾರವಾಡ

ವಿ. ಮುನಿ ವೆಂಕಟಪ್ಪ ಕೋಲಾರ

ರಾಮಣ್ಷ ಬ್ಯಾಟಿ ( ವಿಶೇಷ ಚೇತನ) ಗದಗ

ವಲೇರಿಯನ್ ಡಿಸೋಜ (ವಲ್ಲವಗ್ಗ) ದಕ್ಷಿಣ ಕನ್ನಡ

ಡಿ ಎನ್ ಅಕ್ಕಿ ಯಾದಗಿರಿ.

 

ಮೊತ್ತ 1 ಲಕ್ಷ  ರೂಪಾಯಿ ಹಾಗೂ 25 ಗ್ರಾಂನ ಚಿನ್ನದ ಪದಕ.

 

ನವೆಂಬರ್ 7 ರಂದು ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

 

ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ಸರಳ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗುತ್ತೆ.

 

ಈ ಬಾರಿ ಯುವ ಬಿಗ್ರೇಡ್ ಗೆ ರಾಜ್ಯೋತ್ಸವ ಪ್ರಶಸ್ತಿ. ಬಿಜೆಪಿ, ಆರ್ ಎಸ್ ಎಸ್ ಪೋಷಿತ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ಎಂಬ ಪ್ರಶ್ನೆಗೆ

 

ಸಂಘ ಸಂಸ್ಥೆ ಕ್ಷೇತ್ರದಲ್ಲಿ ಸಾಧನೆ ಪರಿಗಣಿಸಿ ಪ್ರಶಸ್ತಿ ನಿಯಮ ಮೀರಿ ಪ್ರಶಸ್ತಿ ಕೊಟ್ಟಿಲ್ಲ

ಆರ್ ಎಸ್ ಎಸ್ ಪೋಶಿತ ಆದ್ರೂ ಕೊಡಬಾರದು ಅಂತಿಲ್ಲ. ಸೇವೆಯನ್ನ ಪರಿಗಣಿಸಿ ಕೊಟ್ಟಿದ್ದೇವೆ ಎಂದು ಸಚಿವ ಸಿ.ಟಿ ರವಿ ಹೇಳಿದರು.

ಯಾರಿಂದಲೂ ಒತ್ತಡ ನಡೆದಿಲ್ಲ, ಕೆಲವ್ರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿವಿಧ ಶಿಫಾರಸ್ಸು ಬಂದಿದ್ದರೂ ಅರ್ಹತೆ ಗಮನಿಸಿ ಪ್ರಶಸ್ತಿ ನೀಡಲಾಗಿದೆ. ಕ್ರೀಡೆ ಹೊರತುಪಡಿಸಿ 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗಿದೆ. ಸಾಮಾಜಿಕ ನ್ಯಾಯ ಒದಗಿಸಲಾಗಿದೆ ಎಂದು ಹೇಳಿದರು.


Spread the love

Leave a Reply

Your email address will not be published. Required fields are marked *