ಆ ‘ಗಬ್ಬಿ’ ಶ್ಯಾಮ ಜಾಧವ ಹುಡುಗ ಅಲ್ವಂತೆ..!

ಹುಬ್ಬಳ್ಳಿ: ರಸ್ತೆಯಲ್ಲಿ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಧಮಕಿ ಹಾಕಿದ್ದ ಗಬ್ಬಿ ಎಂಬ ರೌಡಿ ಷೀಟರ್, ಸೆಟ್ಲಮೆಂಟಿನ ಶ್ಯಾಮ ಜಾಧವ ಹುಡುಗ ಅಲ್ವಂತೆ ಎನ್ನೋದನ್ನ ಸ್ವತಃ ಶ್ಯಾಮ ಜಾಧವ ಹೇಳಿದ್ದಾರೆ.
ಹುಬ್ಬಳ್ಳಿ ಸಮೀಪದ ಗಬ್ಬೂರ ಬೈಪಾಸ್ ಬಳಿಯಲ್ಲಿ ಬೈಕ ಅಪಘಾತಗಳು ನಡೆದಾಗ, ಯಾವುದೇ ರೀತಿಯಲ್ಲೂ ಇನ್ನುಳಿದವರ ಮಾತು ಕೇಳದೇ, ರೌಡಿಸಂ ತೋರಿಸಲು ಹೋಗಿದ್ದ ಗಬ್ಬಿ ಎಂಬಾತನಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂಬುದು ಶ್ಯಾಮ ಹೇಳಿಕೆಯಾಗಿದೆ.
ರೌಡಿ ಷೀಟರ್ ಗಬ್ಬಿ ಅಮಾಯಕ ಜನರ ಮೇಲೆ ರೌಡಿಸಂ ಮಾಡುತ್ತ ಬೆದರಿಸುತ್ತಿದ್ದ ದೃಶ್ಯಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ, ಈತ ಶ್ಯಾಮ ಜಾಧವ ಕಡೆಯಾತ ಎಂದು ಹೇಳಲಾಗಿತ್ತು.