ನಾರಾಯಣ ಭರಮನಿ, ಮಹಾಂತೇಶ್ವರ ಜಿದ್ದಿ, ರಾಮನಗೌಡ ಹಟ್ಟಿ ಸೇರಿ ’35 DYSP’ಗಳಿಗೆ ಪ್ರಮೋಷನ್…
1 min readಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವತೈದು ಅಧಿಕಾರಿಗಳಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಲಾಗಿದೆ.
ಕೆಸಿಎ ನಿಯಮ 32ರಡಿ ಆದೇಶ ಹೊರಡಿಸಲಾಗಿದ್ದು, ಈಗಿದ್ದ ಸ್ಥಳಗಳಿಂದ ಬೇರೆಡೆ ವರ್ಗಾವಣೆ ಮಾಡಲಾಗಿದೆ. ಉತ್ತರ ವಲಯ ಐಜಿಪಿ ಕಚೇರಿಯಲ್ಲಿದ್ದ ಮಹಾಂತೇಶ್ವರ ಜಿದ್ದಿ ಅವರನ್ನ ಬಾಗಲಕೋಟೆ ಜಿಲ್ಲೆಯ ಹೆಚ್ಚುವರಿ ಅಧೀಕ್ಷಕ-2 ಹುದ್ದೆಗೆ ಬಡ್ತಿ ನೀಡಲಾಗಿದೆ.
ರಾಮದುರ್ಗದ ಡಿವೈಎಸ್ಪಿಯಾಗಿದ್ದ ರಾಮನಗೌಡ ಹಟ್ಟಿಯವರಿಗೆ ಬಡ್ತಿ ನೀಡಿ ವಿಜಯಪುರ ಜಿಲ್ಲೆಯ ಹೆಚ್ಚುವರಿ ಅಧೀಕ್ಷಕ-2 ಹುದ್ದೆ ನೀಡಲಾಗಿದೆ.
ಬೆಳಗಾವಿಯ ಮಾರ್ಕೆಟ್ ಉಪ ವಿಭಾಗದ ಎಸಿಪಿಯಾಗಿದ್ದ ನಾರಾಯಣ ಭರಮನಿ ಅವರಿಗೆ ಪ್ರಮೋಷನ್ ನೀಡಿ, ಧಾರವಾಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹುದ್ದೆ ನೀಡಲಾಗಿದೆ.
ಧಾರವಾಡ ಲೋಕಾಯುಕ್ತದಲ್ಲಿದ್ದ ಶಂಕರ ರಾಗಿ, ಮಡಿವಾಳೆಪ್ಪ ಸಂಕದ ಅವರಿಗೂ ಪ್ರಮೋಷನ್ ಆಗಿದೆ.