ಧಾರವಾಡ ಮಾನಸಿಕ ಆಸ್ಪತ್ರೆಯಿಂದ ಪರಾರಿ
1 min readಧಾರವಾಡ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲು ಮಾಡಿ ಹೋಗಿದ್ದ ಸಂಬಂಧಿಕರು, ತಮ್ಮೂರು ತಲುಪುವ ಮುನ್ನವೇ ರೋಗಿಯು ಆಸ್ಪತ್ರೆಯಿಂದ ಪರಾರಿಯಾದ ಘಟನೆ ಧಾರವಾಡ ಮಾನಸಿಕ ಆಸ್ಪತ್ರೆಯಲ್ಲಿ ನಡೆದಿದೆ.
ಬಾಗಲಕೋಟೆಯ ನವನಗರದ ಸೆಕ್ಟರ್ 45ರ ನಿವಾಸಿಯಾದ ಯಾಕೂಬ ಜಮಾದಾರ ಎಂಬಾತನೇ ಆಸ್ಪತ್ರೆಯಿಂದ ಕಾಣೆಯಾಗಿದ್ದು, ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ಆರೋಗ್ಯವಾಗಿಯೇ ಇದ್ದ ಯಾಕೂಬ ಕೆಲವು ದಿನಗಳಿಂದ ಮಾನಸಿಕವಾಗಿ ಕುಗ್ಗಿ, ತೊಂದರೆ ಅನುಭವಿಸತೊಡಗಿದ್ದ. ಇದೇ ಕಾರಣಕ್ಕೆ ಧಾರವಾಡದ ಮಾನಸಿಕ ರೋಗಿಗಳ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಕೆಲವೊತ್ತು ಆಸ್ಪತ್ರೆಯಲ್ಲಿದ್ದ ಯಾಕೂಬ ಈಗ ನಾಪತ್ತೆಯಾಗಿದ್ದು, ಆಸ್ಪತ್ರೆಯ ಸೆಕ್ಯುರಿಟಿಯ ಬಗ್ಗೆಯೂ ಅನುಮಾನ ಮೂಡುತ್ತಿದೆ. ಈ ವ್ಯಕ್ತಿಯ ಬಗ್ಗೆ ಎಲ್ಲಿಯಾದರೂ ಮಾಹಿತಿ ಸಿಕ್ಕರೇ ತಮಗೆ ತಿಳಿಸುವಂತೆ ಉಪನಗರ ಠಾಣೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.