ರಾಷ್ಟ್ರ ಮಟ್ಟದ ಸ್ಟ್ರೆಂತ್ ಲಿಪ್ಟಿಂಗ್ ಸ್ಪರ್ಧೆ: ಧಾರವಾಡಿಗರ ಸಾಧನೆ
1 min readಧಾರವಾಡ: ಕರ್ನಾಟಕ ರಾಜ್ಯ ಸ್ಟ್ರೆಂತ್ ಲಿಪ್ಟಿಂಗ್ ಅಸೋಷಿಯೇಶನ್ ವತಿಯಿಂದ ದಾವಣೆಗೇರಿ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರಲ್ಲಿ 24-1-2021 ರಂದು ಆಯೋಜಿಸಿದ ರಾಜ್ಯ ಮಟ್ಟದ ಸ್ಟ್ರೆಂತ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಧಾರವಾಡದ ಸ್ಪಾರ್ಕ್ ವ್ಯಾಯಾಮ ಶಾಲೆಯ ಸ್ಪರ್ಧಾರ್ಥಿಗಳು 8 ಚಿನ್ನ, 5 ಬೆಳ್ಳಿ, 1 ಕಂಚಿನ ಪದಕದೊಂದಿಗೆ ರನ್ನರ್ ಅಪ್ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿವಿಧ ಜಿಲ್ಲೆಗಳಿಂದ ಸುಮಾರು 200ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಧಾರವಾಡದ ಸ್ಪಾರ್ಕ್ ವ್ಯಾಯಾಮ ಶಾಲೆಯ 11 ಸ್ಪರ್ಧಾರ್ಥಿಗಳು ಪೈಕಿ 10 ಜನರು ವಿವಿಧ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನ-ಬೆಳ್ಳಿ ಪದಕಗಳೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದರು.
ಅಂಗವಿಕಲರ ವಿಭಾಗ:
75 ಕೆ.ಜಿ ಬೆಂಚ್ ಲಿಪ್ಟಿಂಗ್ ವಿಭಾಗದಲ್ಲಿ ಸ್ಪಾರ್ಕ್ ವ್ಯಾಯಾಮ ತರಬೇತಿದಾರ ಮಹ್ಮದಗೌಸ್ ಕಳಸಾಪೂರ ಚಿನ್ನದ ಪದಕ ಪಡೆದಿದ್ದಾರೆ. ಜೊತೆಗೆ ಸ್ಪರ್ಧೆಯಲ್ಲಿ ಕರ್ನಾಟಕದ ಸ್ಟ್ರಾಂಗ್ ಮ್ಯಾನ್ ಚಾಂಪಿಯನಶಿಫ್ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಓರ್ವ ಅಂಗವಿಕಲ ತರಬೇತಿದಾರನಾಗಿ ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
80 ಕೆ.ಜಿ ವಿಭಾಗದಲ್ಲಿ ಧಾರವಾಡ ಜಿಲ್ಲಾ ಅಂಗವಿಕಲರ ಅಧ್ಯಕ್ಷರಾದ ಕೇಶವ ತೆಲಗು ಚಿನ್ನದ ಪದಕ ಪಡೆದಿದ್ದಾರೆ. 60 ಕೆ.ಜಿ ವಿಭಾಗದಲ್ಲಿ ನಫೀರ್ ಅಹ್ಮದ್ ಚಿನ್ನದ ಪದಕ, ಮಹಿಳಾ ವಿಭಾಗದ 42 ಕೆ.ಜಿ ಸ್ಪರ್ಧೆಯಲ್ಲಿ ಮಂಗಳಾ ಬೆಟಗೇರಿ ಬಂಗಾರ ಪದಕ ಪಡೆದು, ಜಿಲ್ಲೆಯ ಪ್ರಥಮ ವೆಟ್ ಲಿಪ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ ಎಂದರು.
ಸಾಮಾನ್ಯ ವಿಭಾಗ:
60 ಕೆ.ಜಿ ವಿಭಾಗದಲ್ಲಿ ಶುಭಂ ಬೋಸ್ಲೆ ಬೆಳ್ಳಿ, 77 ಕೆ.ಜಿ. ಜೂನಿಯರ್ ವಿಭಾಗದಲ್ಲಿ ಅಮಿತ್ ಹೂಗಾರ ಬೆಳ್ಳಿ, ಸಬ್ ಜೂನಿಯರ್ ವಿಭಾಗದಲ್ಲಿ ಬೆಳ್ಳಿ ಹಾಗೂ ಹಿರಿಯರ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ. 70 ಕೆ.ಜಿ. ಜೂನಿಯರ್ ವಿಭಾಗದಲ್ಲಿ ಅಭಿಷೇಕ ಜಿ ಬೆಳ್ಳಿ ಪದಕ ಪಡೆದಿದ್ದಾರೆ. ಚಂದನಕುಮಾರ ಬೆಳ್ಳಿ ಹಾಗೂ ಆದರ್ಶ ಹೂಗಾರ ಭಾಗವಹಿಸಿದ್ದರು ಎಂದು ಹೇಳಿದರು.
ಮಹಿಳಾ ವಿಭಾಗ:
40 ಕೆ.ಜಿ ಜೂನಿಯರ್ ವಿಭಾಗದಲ್ಲಿ ಸಬ್ ಜೂನಿಯರ್ ಹಾಗೂ ಹಿರಿಯ ವಿಭಾಗದಲ್ಲಿ 13 ವರ್ಷದ ಬಾಲಕಿ ಸಾಧಿಕಾ ಎಚ್ ಅತ್ತಾರ ಚಿನ್ನದ ಪದಕ ಪಡೆದಿರುವುದು ರಾಜ್ಯಕ್ಕೆ ಹಾಗೂ ಧಾರವಾಡ ಜಿಲ್ಲೆಗೆ ಹೆಮ್ಮೆಯ ವಿಷಯ. 80 ಕೆ.ಜಿ ವಿಭಾಗದಲ್ಲಿ ಅನಿತಾ ಭದ್ರಾಪೂರ ಕೂಡ ಬಂಗಾರದ ಪದಕಕ್ಕೆ ಕೊರಳು ಒಡ್ಡಿದ್ದಾರೆ ಎಂದರು.
ಈ ಸ್ಪರ್ಧಾರ್ಥಿಗಳು ಮಾರ್ಚ್ ನಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯುವ ರಾಷ್ಟ್ರ ಮಟ್ಟದ ವೆಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಲಿದ್ದಾರೆ. ಧಾರವಾಡ ಇಷ್ಟೊಂದು ಜನ ಇದೇ ಮೊದಲು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಅಂಗವಿಕಲರ ಪ್ರತಿಭೆ ಅನಾವರಣಕ್ಕೆ ಬಿಗ್ ಬ್ರೇಡ್ ಮಾಲೀಕರಾದ ಸಂಜಯ ಮೀಶ್ರಾ ಮತ್ತು ಸಾಂಡಿಲ್ ಡಾಂಗೆ, ವ್ಯಾಯಾಮ ಶಾಲೆ ಮಾಲೀಕ ಸಯ್ಯದ್ ಅಲಿ ಕಳಸಾಪೂರ ಬೆಂಗಾಲಾಗಿ ನಿಂತಿದ್ದಾರೆ. ಬಡ ಕುಟುಂಬದ ಈ ಕ್ರೀಡಾಪಟುಗಳಿಗೆ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಹಣಕಾಸಿನ ತೊಂದರೆ ಎದುರಾಗಿದೆ. ಹೀಗಾಗಿ ನೆರವು ನೀಡಲು ಸಂಘ-ಸಂಸ್ಥೆಗಳು ಮತ್ತು ದಾನಿಗಳು ಮುಂದೆ ಬರಬೇಕೆಂದು ಮಾಧ್ಯಮಗಳ ಮೂಲಕ ಕೋರಿಕೊಳ್ಳುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೇಶವ ತೆಲಗು-ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಧಾರವಾಡ ಜಿಲ್ಲಾಧ್ಯಕ್ಷ ಮಹ್ಮದಗೌಸ್ ಕಳಸಾಪೂರ, ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಧಾರವಾಡ ಗೌರವಾಧ್ಯಕ್ಷ ಮಂಗಳಾ ಬೆಟಗೇರಿ, ಸಾಧಿಕಾ ಅತ್ತಾರ, ಅನಿತಾ ಭದ್ರಪೂರ ಇದ್ದರು.