ಧಾರವಾಡ ಮರಾಠಾ ಸಮಾಜದ ಉಪಾಧ್ಯಕ್ಷ ಯಲ್ಲಪ್ಪ ಚವ್ಹಾಣ “ಪುತ್ರ” ನೇಣಿಗೆ ಶರಣು….!!!

ಧಾರವಾಡ: ಮರಾಠಾ ಸಮಾಜದ ಉಪಾಧ್ಯಕ್ಷರೋರ್ವರ ಪುತ್ರ ಹೊಲದಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಯಲ್ಲಪ್ಪ ಚವ್ಹಾಣ ಎಂಬುವವರ ಪುತ್ರ ಪ್ರಕಾಶ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿದ್ದು, ಯಲ್ಲಪ್ಪ ಅವರು ಪ್ರತಿಷ್ಠಿತ ಮರಾಠಾ ಸಮಾಜದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪುತ್ರನ ಸಾವು ಸಮುದಾಯದಲ್ಲಿ ತೀವ್ರ ಅಚ್ಚರಿ ಮೂಡಿಸಿದೆ.
ಯಲ್ಲಪ್ಪ ಅವರು ಒಕ್ಕಲುತನ ಮಾಡುತ್ತಿದ್ದಾರೆ. ಪ್ರಕಾಶ ಚವ್ಹಾಣ ಸಾವಿನಿಂದ ತಂದೆ ಕಂಗೆಟ್ಟಿದ್ದಾರೆ. ಮಾಹಿತಿ ಗೊತ್ತಾಗುತ್ತಿದ್ದ ಹಾಗೇ ಪೊಲೀಸರು ಶವವನ್ನ ಜಿಲ್ಲಾಸ್ಪತ್ರೆಗೆ ಸಾಗಿಸಿ, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.