ಐಪಿಎಸ್ ಪಿ.ಕೃಷ್ಣಕಾಂತ ಧಾರವಾಡ ಎಸ್ಪಿಯೂ ಹೌದು.. ಡಿಸಿಪಿಯೂ ಹೌದು..!

ಧಾರವಾಡ: ಹುಬ್ಬಳ್ಳಿ-ಧಾರವಾಡ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯಾಗಿದ್ದ ಪಿ.ಕೃಷ್ಣಕಾಂತ ಅವರನ್ನ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಇದೀಗ ಅವರನ್ನ ಮೊದಲಿದ್ದ ಡಿಸಿಪಿ ಹುದ್ದೆಯಲ್ಲೂ ಮುಂದುವರೆಸಿ ಸರಕಾರ ಆದೇಶ ಹೊರಡಿಸಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ಆರ್.ದಿಲೀಪರಿದ್ದ ಸಮಯದಲ್ಲಿ ಕೆಲವು ಗೊಂದಲಗಳು ಸೃಷ್ಠಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಭೇಟಿಯಾಗಲು ಅವಕಾಶ ಕೋರಿ ಡಿಸಿಪಿಯವರು ಪತ್ರ ಬರೆಯುವ ಸ್ಥಿತಿ ನಿರ್ಮಾಣವಾಗಿತ್ತು. ಈ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದಲೇ ಸರಕಾರ ಅಧಿಕಾರಿಗಳನ್ನ ವರ್ಗಾವಣೆ ಮಾಡಿದೆ.
ಡಿಸಿಪಿ ಕೃಷ್ಣಕಾಂತ ಕಾರ್ಯವೈಖರಿಯ ಬಗ್ಗೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕೂಡಾ, ಒಳ್ಳೆಯ ಮಾತುಗಳನ್ನ ಆಡಿದ್ದರು. ಈಗ ಅಂತಹ ಅಧಿಕಾರಿಗೆ ಎರಡು ಸ್ಥಾನದಲ್ಲಿ ಮುಂದುವರೆಸಲು ಸರಕಾರ ಆದೇಶ ಹೊರಡಿಸಿದೆ.
ಐಪಿಎಸ್ ಪಿ.ಕೃಷ್ಣಕಾಂತ ದಕ್ಷ ಅಧಿಕಾರಿಯಾಗಿದ್ದು, ಎರಡು ಕಡೆ ಉತ್ತಮವಾಗಿ ಕರ್ತವ್ಯ ನಿರ್ವಹಿಸಲಿದ್ದಾರೆಂಬ ಭರವಸೆ ಪೊಲೀಸ್ ವಲಯದಲ್ಲಿದೆ.