ಬೆಳೆವಿಮೆ “ಪರಿಹಾರ 50-50”- ಧಾರವಾಡ ಜಿಲ್ಲಾಧಿಕಾರಿಗಳು ‘ಬಡ ರೈತರ’ ಪರವಾಗಿ ಇಲ್ವಾ…!?

ಧಾರವಾಡ: ಬೆಳೆವಿಮೆ ಪರಿಹಾರದಲ್ಲಿ 50-50 ವಂಚನೆಯ ಬಗ್ಗೆ ಹಲವು ಮಾಹಿತಿಗಳನ್ನ ಹೊರಹಾಕಿ ಬಡ ರೈತರಿಗೆ ಆಗಿರುವ ತೊಂದರೆಗಳ ಕುರಿತು ಸಾಕಷ್ಟು ವಿವರ ಹೊರಬಂದ ನಂತರವೂ ಧಾರವಾಡದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳ ವಿಚಾರಣೆ ಮಾಡದೇ ಇರುವುದು ಕಂಡು ಬರತೊಡಗಿದೆ.
ಧಾರವಾಡ ಜಿಲ್ಲೆಯ ಹಲವು ಗ್ರಾಮದಲ್ಲಿ ಕೆಲ ಶ್ರೀಮಂತ ರೈತರು ಬಾನಗಡಿ ಮಾಡಿ ಮುಂಗಾರು ಫಸಲಿನ ವೇಳೆಯಲ್ಲಿ ಹೆಸರು ಬೆಳೆಗೆ ‘ಬೆಳೆವಿಮೆ’ ಮಾಡಿಸಿದ್ದರು. ಸಣ್ಣ ಹಿಡುವಳಿ ರೈತರಿಗೆ ಮರಾಮೋಸ ನಡೆದಿದೆ.
ಮುಂಗಾರು ಫಸಲಿಗೆ ಹೆಸರು ಬೆಳೆ ವಿಮೆ ಮಾಡಿಸಿದ ನೀಚ ಶಿಖಂಡಿಗಳು ಈಗ ಹಿಂಗಾರು ಹಂಗಾಮಿನಲ್ಲಿ ಕಡಲೆ ಬೆಳೆಗೆ ವಿಮೆ ಮಾಡಿಸಿ, ವಂಚನೆಗೆ ಮುಂದಾಗಿದ್ದಾರೆ. ಈ ದಂಧೆಗೆ ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಹಲವರು ಭಾಗಿಯಾಗಿದ್ದಾರೆ.
ಫಿಪ್ಟಿ-ಫಿಪ್ಟಿ ದಂಧೆಯಲ್ಲಿ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯ ಪ್ರಮುಖರು ಭಾಗಿಯಾಗಿರುವ ಶಂಕೆಯಿದೆ. ಬೆಳೆವಿಮೆ ಭರಿಸುವ ಕೊನೆಯ ಮೂರೇ ಮೂರು ದಿನದಲ್ಲಿ ಎಷ್ಟು ಸಾವಿರ ಎನ್‌ರೋಲ್‌ಗಳು ಯಾವ್ಯಾವ ತಾಲೂಕಿನಲ್ಲಿ ನಡೆದಿದೆ. ಈ ದಂಧೆಗೆ ಗ್ರಾಮ ಒನ್, ಸಿಎಸ್‌ಸಿ ಸೆಂಟರ್‌ನವರು ಸಾಥ್ ನೀಡಿರುವ ಮಾಹಿತಿಯನ್ನ ಇಲ್ಲಿಯವರೆಗೆ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪಡೆಯದೇ ಇರುವುದು, ತನಿಖೆಗೆ ಒಳಪಡಿಸದೇ ಇರುವುದು ಸೋಜಿಗವಾಗಿದೆ.