ಬೆಳೆವಿಮೆ “ಪರಿಹಾರ 50-50”- ಕೆಳದರ್ಜೆಯ ನೌಕರನಿಂದ ಕ್ಲಾಸ್ ಒನ್ ಅಧಿಕಾರಿಗಳು ಶಾಮೀಲು… ಸೋಮವಾರದಿಂದ ನೋಟಿಸ್ ಜಾರಿ…!?

ಧಾರವಾಡ: 2024ರ ಹೆಸರು ಬೆಳೆವಿಮೆ ಪಡೆಯಲು ಮೋಸದ ಜಾಲ ಮಾಡಿಕೊಂಡಿದ್ದ ಕೆಲ ನೀಚ ಶ್ರೀಮಂತ ರೈತರಿಗೆ ಕ್ಲಾರ್ಕಗಳಿಂದ ಹಿಡಿದು ಕ್ಲಾಸ್ ಒನ್ ಅಧಿಕಾರಿಗಳು ಸಾಥ್ ನೀಡಿರುವ ಅಂಶ ಬೆಳಕಿಗೆ ಬರುತ್ತಿದ್ದು, ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.
ಸರಕಾರದ ಹಣ ವಂಚನೆ ಮಾಡುವುದಲ್ಲದೇ ಬಡ ರೈತರ ಬದುಕಿಗೆ ಬೆಂಕಿಯಿಡುವ ಜಾಲದ ಹಿಂದೆ ಗದಗ ತಾಲೂಕಿನ ದುಂದೂರ ಗ್ರಾಮದ ಓರ್ವ ಶ್ರೀಮಂತ ರೈತನಿರುವುದು ಖಾತ್ರಿಯಾಗಿದೆ. ಈತನ ಎರಡನೇಯ ಹೆಂಡತಿ ಇತ್ತೀಚಿಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿ, ಆಸ್ತಿ ಕೊಡುವಂತೆ ಹೇಳಿದ್ದು ರಹಸ್ಯವಾಗಿ ಉಳಿದಿಲ್ಲ.
ಕರ್ಮ ರಿಟರ್ನ್ಸ್ ಅನ್ನುವ ಹಾಗೇ ಘಟನೆಗಳು ನಡೆದಿವೆ. ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ ತಾಲೂಕಿನಲ್ಲಿಯೂ “ದಾಡಿ” ಗಿರಾಕಿಯ ಏಜೆಂಟರು ಕಾರ್ಯನಿರ್ವಹಿಸಿದ್ದಾರೆ.
ಇಂತಹ ಕುಕೃತ್ಯಕ್ಕೆ ಭ್ರಷ್ಟ ಅಧಿಕಾರಿಗಳು ಸಾಥ್ ನೀಡಿ ಕೋಟಿ ಕೋಟಿ ಲೂಟಿ ಹೊಡೆದಿರುವುದನ್ನ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶ ನೀಡುವ ಸ್ಥಿತಿಯಲ್ಲಿದ್ದಾರೆ.
ಸಾವಿರಾರೂ ಬಡ ರೈತರ ಬಾಯಿಗೆ ಮಣ್ಣು ಹಾಕುವ ನೀಚರಿಗೆ ತಕ್ಕ ಪಾಠವಾಗುವವರೆಗೆ ಈ ಮಾಹಿತಿಗಳು ನಿರಂತರವಾಗಿ ಹೊರಬರಲಿವೆ.