Posts Slider

Karnataka Voice

Latest Kannada News

ಗ್ರಾ.ಪಂ ಚುನಾವಣೆಗೆ ಮತದಾನ ಮಾಡಿದ ಕೋವಿಡ್-19 ಸೋಂಕಿತರು

1 min read
Spread the love

ಹುಬ್ಬಳ್ಳಿ: ತಾಲೂಕಿನ ಶೇರೆವಾಡ ಮತ್ತು ಶಿರಗುಪ್ಪಿ ಗ್ರಾಮದ ಮತಗಟ್ಟೆಗಳಲ್ಲಿ ಕೋವಿಡ್ ಸೋಂಕಿತರು ಇಂದು ಸಂಜೆ ಪಿಪಿಇ ಕಿಟ್ ಧರಿಸಿ, ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮತದಾನ ಮಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಚುನಾವಣೆ ಎಷ್ಟೊಂದು ಮಹತ್ವ ಪಡೆದಿದೆ ಎನ್ನುವುದಕ್ಕೆ ಸಾಕ್ಷಿಯಂಬಂತೆ ಕೋವಿಡ್-19 ಸೋಕಿತರು ಕೂಡಾ ಬಂದು ಮತದಾನ ಮಾಡಿದ್ದು ಸಾಕ್ಷಿಯಾಗಿತ್ತು. ಪ್ರತಿಯೊಂದು ಮತಗಳನ್ನ ತಮಗೆ ಹಾಕಿಸಿಕೊಳ್ಳಬೇಕೆಂಬ ಅಭ್ಯರ್ಥಿಗಳ ಹೆಬ್ಬಯಕೆ ಈಡೇರಿಸಲು ಸೋಂಕಿತರು ಆಗಮಿಸಿದ್ದು, ಚುನಾವಣೆಯ ಕಾವನ್ನ ತೋರಿಸುವಂತಿತ್ತು.

ಬಹುತೇಕವಾಗಿ ಜಿಲ್ಲೆಯಲ್ಲಿ ಚುನಾವಣೆ ಶಾಂತವಾಗಿ ನಡೆದಿದ್ದು, ಸರದಿ ಸಾಲಿನಲ್ಲಿ ನಿಂತು ಮತಗಳನ್ನ ಚಲಾಯಿಸುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು.

ಪುರುಷರಿಗಿಂತ ಮಹಿಳಾ ಮತದಾರರು ಉತ್ಸುಕರಾಗಿ ಬಂದು ಮತದಾನ ಮಾಡಿದ್ರು. ಹುಬ್ಬಳ್ಳಿ ತಾಲೂಕಿನ ಕಟ್ನೂರ ಮತ್ತು ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿನ ಕೆಲವು ಸಮಸ್ಯೆಗಳನ್ನ ಹೊರತುಪಡಿಸಿದರೇ, ಯಾವುದೇ ತೊಂದರೆ ಇಲ್ಲದ ಹಾಗೇ ಚುನಾವಣೆ ನಡೆಯಿತು.


Spread the love

Leave a Reply

Your email address will not be published. Required fields are marked *