ಕೈ ಕಾಲು ಬಿದ್ದಿದ್ದಕ್ಕೆ ಒಪ್ಪಿಕೊಂಡೇವಿ. ನ.26 ಒಳಗೆ ಆಗದಿದ್ದರೇ ಕೋಟಿ ರೈತರು “ಪ್ರಲ್ಹಾದ ಜೋಶಿಯವರ” ಮನೆಗೆ ಬರ್ತೇವಿ…
ಧಾರವಾಡ: ಹಲವು ದಿನಗಳಿಂದ ನಡೆಯುತ್ತಿದ್ದ ರೈತರ ಪಾದಯಾತ್ರೆಗೆ ಸದ್ಯ ಅಂತ್ಯ ಹಾಡಲು ಮುಂದಾಗಿರುವ ಕುರಿತು ರೈತ ನಾಯಕರು ಸ್ಪಷ್ಟ ನಿರ್ಧಾರವನ್ನ ಹೇಳಿದ್ದು, ನವೆಂಬರ್ 26ರೊಳಗೆ ಕೇಂದ್ರದ ತೀರ್ಮಾನ ಹೊರಬರದಿದ್ದರೇ ಕೇಂದ್ರ ಸಚಿವರ ಮನೆ ಮುಂದೆ ಕೋಟಿ ರೈತರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಚುನ್ನಪ್ಪ ಪೂಜಾರಿ ಅವರ ಹೇಳಿಕೆ…
ಕೈಕಾಲು ಹಿಡಿದು ಕೇಳಿಕೊಂಡಿದ್ದಕ್ಕೆ ಪಾದಯಾತ್ರೆ ನಿಲ್ಲಿಸಿದ್ದೇವೆ. ಸಕ್ಕರೆ ಹೊರಗೆ ಹೋಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಇದೇ ಸಮಯದಲ್ಲಿ ಶಶಿಕಾಂತ ಗುರೂಜಿ ಅವರು ಕೂಡಾ ಮಾತನಾಡಿದರು.
ಕಬ್ಬಗೆ MSP ಪಡದೇ ಪಡೆಯುತ್ತೇವೆ. ಈಗ ನೀಡುತ್ತಿರುವ ಗಡುವು ಮುಗಿದರೇ ದೇಶದ ವಿವಿಧ ರಾಜ್ಯಗಳಲ್ಲಿ ಬಂದ್ ಮಾಡುವ ಶಕ್ತಿ ಹೊಂದಿದ್ದೇವೆ ಎಂದರು.
