ಯಡಿಯೂರಪ್ಪ 3 ವರ್ಷ ಸಿಎಂ ಇರ್ತಾರಂತ ನಾ ಹೇಳೂದಿಲ್ಲ_ ಯತ್ನಾಳ ಹೊಸ ಟಾಕ್
1 min readವಿಜಯಪುರ: ಯಡಿಯೂರಪ್ಪ 3 ವರ್ಷ ಸಿಎಂ ಆಗಿರ್ತಾರೆ ಎಂದು ನಾನೇನೂ ಹೇಳುವುದಿಲ್ಲ. ಬೇರೆ ಸಚಿವರಂತೆ ಸೂರ್ಯ, ಚಂದ್ರರಿರುವಷ್ಟು ದಿನ ಸಿಎಂ ಆಗಿರ್ತಾರೆ ಎಂದು ಹೇಳಲ್ಲವೆಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮಾತಾಡಿದ್ದು ಹೀಗೆ
ನಾನ್ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಅನುದಾನ ತಡೆಯನ್ನು ಪ್ರಶ್ನಿಸಿದ್ದೇನೆ. ಹೀಗಾಗಿ ಇಂದು ರಾಜ್ಯದ ಬಹುತೇಕ ಮಹಾನಗರ ಪಾಲಿಕೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಮಗು ಅಳದಿದ್ದರೆ ತಾಯಿ ಹಾಲು ಕುಡಿಸುವುದಿಲ್ಲ. ಮೊನ್ನೆ ನಾನು ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ್ದೆ ಎಂದು ಹೇಳಿದರು.
ನಾನು ಸಚಿವನೇ ಆಗಿಲ್ಲ. ಸಿಎಂ ಸ್ಥಾನದ ಆಕಾಂಕ್ಷಿಯಂತೂ ಅಲ್ಲವೇ ಅಲ್ಲ. ಯಾರ ಹಣೆಯಲ್ಲಿ ಏನು ಬರೆದಿದೆ ಯಾರಿಗೆ ಗೊತ್ತು ಎಂದು ವಿಜಯಪುರದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಹೇಳಿದರು.