ಮಾಜಿ ಮಂತ್ರಿ ವಿನಯ ಕುಲಕರ್ಣಿ ಮೇಲೆ ಸಿಬಿಐ ಯಾವ್ಯಾವ ಕೇಸ್ ಹಾಕಿದೆ ಗೊತ್ತಾ..!
1 min readಧಾರವಾಡ: ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆಗೆ ಸಂಬಂಧಿಸಿದಂತೆ ನಡೆದಿರುವ ಸಿಬಿಐ ತನಿಖೆಯಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಮೇಲೆ ಸಿಬಿಐ ಯಾವ ಯಾವ ಪ್ರಕರಣಗಳನ್ನ ದಾಖಲು ಮಾಡಿದೆ ಎಂಬುದು ಗೊತ್ತಾಗಿದೆ.
ಸಾಕ್ಷಿಗಳ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಮತ್ತೊಂದು ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಮೊದಲನೇಯ ಆರೋಪಿಯನ್ನಾಗಿ ಮಾಡಲಾಗಿದೆ. ಆ ಪ್ರಕರಣದಲ್ಲಿ ಒಟ್ಟು ಎಂಟು ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ಕೊಲೆಗೆ ಸಂಚು ಆರೋಪದ ಹಿನ್ನೆಲೆಯಲ್ಲಿ ವಿನಯ ಕುಲಕರ್ಣಿ ಬಂದಿಸಿದ್ದಾಗಿ ಸಿಬಿಐ ತನ್ನ ಅರೆಸ್ಟ್ ಮೆಮೊನಲ್ಲಿ ಸ್ಪಷ್ಟವಾಗಿ ನಮೂದಿಸಿದೆ. ನಿನ್ನೆ ಮಧ್ಯಾಹ್ನ 3 ಗಂಟೆಗೆ ಬಂಧಿಸಿದ್ದಾಗಿ ಸಿಬಿಐ ಹೇಳಿಕೊಂಡಿದ್ದು, ಐಪಿಸಿ 302,143,147,148,120B ಸೆಕ್ಷನ್ ಗಳ ಅಡಿ ಕೇಸ್ ದಾಖಲು ಮಾಡಲಾಗಿದೆ.
ಕೊಲೆ, ಆಸ್ತಿ ವಿವಾದದಲ್ಲಿ ಒಳಸಂಚು, ಸಮಾಜದಲ್ಲಿ ಆತಂಕ ಸೃಷ್ಠಿ ಮಾಡುವದು ಸೇರಿದಂತೆ ಇತರೆ ಸೆಕ್ಷನಗಳಡಿ ಬಂಧನ ಮಾಡಲಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಬೆಳಿಗ್ಗೆ ವಶಕ್ಕೆ ಪಡೆದು ಮಧ್ಯಾಹ್ನ 3 ಗಂಟಗೆ ಬಂದಿಸಿದ್ದಾಗಿ ಸಿಬಿಐ ಸ್ಪಷ್ಟಪಡಿಸಿದೆ.