ಕ್ಯಾನ್ಸರಾಗಿದೆಯಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಹುಬ್ಬಳ್ಳಿ: ತನಗೆ ನಿರಂತರವಾಗಿ ಜ್ಚರ ಬಂದು ಸುಸ್ತಾಗಿದೆಯಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಹೋದ ಮಹಿಳೆಗೆ ಕ್ಯಾನ್ಸರ ಇರುವುದು ಗೊತ್ತಾಗಿದ್ದರಿಂದ, ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಸಂಭವಿಸಿದೆ.
ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಕಲ್ಲವ್ವ ಎಂಬ ಮಹಿಳೆಗೆ ತನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ ಮಾಡಿದ್ದನ್ನ ಗಮನಿಸಿದ ಮನೆಯವರು, ತಕ್ಷಣವೇ ಕಿಮ್ಸಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕಲ್ಲವ್ವ ಸಾವಿಗೀಡಾಗಿದ್ದಾಳೆ.
ಮೃತ ಕಲ್ಲವ್ವ ಮೊದಲಿಂದಲೂ ಆಸ್ಪತ್ರೆಯಿಂದ ದೂರವಿದ್ದವಳೇ. ಆಕೆಗೆ ಸದಾಕಾಲ ಆರೋಗ್ಯವನ್ನ ಕಾಪಾಡಿಕೊಂಡು ಬಂದಿದ್ದಳು. ಆದರೆ, ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ಒಳಗಾಗಿದ್ದಳು.
ವೈಧ್ಯರ ಸಲಹೆ ಮೇರೆಗೆ ಮನೆಗೆ ಬಂದಿದ್ದ ಕಲ್ಲವ್ವ, ಇದರಿಂದ ಸಾಕಷ್ಟು ಮನಸ್ಸಿಗೆ ಬೇಸರ ಮಾಡಿಕೊಂಡಿದ್ದಳು. ಅದೇ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.