ನವಲೂರು ಸೇತುವೆ ಮತ್ತೆ ಕುಸಿತ- ‘ಬಕ್ ವಾಸ್’ BRTS
1 min readಧಾರವಾಡ: ಹುಬ್ಬಳ್ಳಿ-ಧಾರವಾಡದ ದುರ್ಗತಿಯೋ ಅಥವಾ ಇಲ್ಲಿನ ಆಡಳಿತ ವ್ಯವಸ್ಥೆ ಹೀಗೇನೋ ಎನ್ನುವ ಥರದಲ್ಲಿ ಎಲ್ಲವೂ ನಡೆಯುತ್ತಿದೆ. ಇದೀಗ ಮತ್ತೆ ನವಲೂರು ಸೇತುವೆಯ ಮತ್ತೊಂದು ಭಾಗದಲ್ಲಿ ಕುಸಿಯಲಾರಂಭಿಸಿದೆ.
ಬಿಆರ್ ಟಿಎಸ್ ಯೋಜನೆಯ ಬಗ್ಗೆ ಸ್ವತಃ ಬಿಜೆಪಿ ಶಾಸಕ ಅರವಿಂದ ಬೆಲ್ಲದ ತಗಾದೆ ತೆಗೆದ ಸಮಯದಲ್ಲೇ ಮತ್ತೊಂದು ಕಡೆ ಸೇತುವೆ ಕುಸಿಯುತ್ತಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಈಗಾಗಲೇ ನವಲೂರು ಸೇತುವೆ ಎರಡು ಭಾಗದಲ್ಲಿ ಕುಸಿದಿತ್ತು. ಕಳಫೆ ಕಾಮಗಾರಿಯಿಂದ ಬೇಸತ್ತು ಹಲವರು ಪ್ರತಿಭಟನೆ ನಡೆಸಿದ್ದರು. ಕಾಂಗ್ರೆಸ್ ನವರು ಕೂಡಾ ರಸ್ತೆ ತಡೆ ನಡೆಸಿ, ಆಡಳಿತ ನಡೆಸುತ್ತಿರುವವರ ವಿರುದ್ಧ ಘೋಷಣೆ ಕೂಗಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದರು.
ಹುಬ್ಬಳ್ಳಿ-ಧಾರವಾಡದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಹತ್ವಾಕಾಂಕ್ಷೆಯ ಬಿಆರ್ ಟಿಎಸ್ ಯೋಜನೆಯು ಇಷ್ಟೊಂದು ಹಳ್ಳ ಹಿಡಿಯುತ್ತಿರುವುದನ್ನ ನೋಡಿದರೇ, ಈ ಯೋಜನೆಯನ್ನ ತಂದಿರುವ ಉದ್ದೇಶವೇ ಹಾಳಾಗಿ ಹೋಗುತ್ತಿದೆ.
ಕಾಮಗಾರಿ ಮಾಡಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದನ್ನ ಬಿಟ್ಟು ಇನ್ನೂ ಮೀನಮೇಷ ಎಣಿಸುತ್ತಿರುವ ಜಿಲ್ಲಾಡಳಿತದ ಕ್ರಮದ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಅಸಹ್ಯ ಮೂಡಿಸಿದೆ.