ಎಂಎಲ್ಸಿ ಚುನಾವಣೆ ಪ್ರಚಾರ: ಬಿಜೆಪಿಯಲ್ಲಿ ಮಿಂಚುತ್ತಿರುವ ಜೋಡೆತ್ತುಗಳು
1 min readಹುಬ್ಬಳ್ಳಿ: ಪಶ್ವಿಮ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಚಾರದಲ್ಲಿ ಹುಬ್ಬಳ್ಳಿಯ ಇಬ್ಬರು ಯುವನಾಯಕರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ವಾಣಿಜ್ಯನಗರಿಯ ಜೋಡೆತ್ತುಗಳಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ.
ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಸಂತೋಷ ಚವ್ಹಾಣ ಹಾಗೂ ಎಸ್.ಸಿ.ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿರುವ ಮಹೇಂದ್ರ ಕೌತಾಳರೇ ಜೋಡೆತ್ತುಗಳಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಇದೀಗ ವಿಧಾನಪರಿಷತ್ ಚುನಾವಣೆಯಲ್ಲೂ ಬಿಜೆಪಿ ಗೆಲ್ಲಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಇಂದು ಕೂಡಾ ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ನಡೆದ ಘಟನಾಯಕರ ಮತ್ತು ಘಟಪ್ರಮುಖರ ಸಭೆಯಲ್ಲಿ ಮಾತನಾಡಿದ ಸಂತೋಷ ಚವ್ಹಾಣ, ಎಸ್.ವಿ.ಸಂಕನೂರರ ಗೆಲುವು ನಿಶ್ಚಿತವಾಗಿದ್ದು, ಅದಕ್ಕೆ ಬೇಕಾಗುವ ಎಲ್ಲ ಪ್ರಯತ್ನವನ್ನ ಮಾಡುವುದಾಗಿ ಹೇಳಿದರು.
ಎಸ್.ಸಿ.ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹೇಂದ್ರ ಕೌತಾಳ ಕೂಡಾ ಮಾತನಾಡಿ, ಪದವೀಧರ ಚುನಾವಣೆಯಲ್ಲಿ ಸಂಕನೂರರವರನ್ನ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಸಂಘಟನೆ ಮಾಡುವುದಾಗಿ ಹೇಳಿದರು.
ಪಕ್ಷದ ಪ್ರಮುಖರ ಮಾರ್ಗದರ್ಶನದ ಮೇರೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಡೆಯುತ್ತಿರುವ ಈ ಜೋಡೆತ್ತುಗಳು, ಈ ಚುನಾವಣೆಯಲ್ಲಿ ಪಕ್ಷದಿಂದ ಮತ್ತಷ್ಟು ಗುರುತಿಸಿಕೊಳ್ಳುವಂತೆ ಮಾಡಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.