ಧಾರವಾಡದಲ್ಲಿ “BGS ಪುಠಾಣಿಗಳ” ಅದ್ಭುತ ಅವಲೋಕನ… ಹಳ್ಳಿಗೂ ಸೈ.. ದಿಲ್ಲಿಗೂ ಸೈ…!!!

ಧಾರವಾಡ: ಸರ್. ಸಿ.ವಿ.ರಾಮನ್ ರವರ ಹುಟ್ಟುಹಬ್ಬದ ಸವಿನೆನಪಿಗಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಬಿಜಿಎಸ್ ಎಜುಕೇಶನ್ ಸೆಂಟರ್‌ನಲ್ಲಿ ವಿಭಿನ್ನವಾಗಿ ಆಚರಣೆ ಮಾಡಲಾಯಿತು.
ಹೇಮಗಿರಿ ಹಾಗೂ ಧಾರವಾಡ ಶಾಖೆಯ ಕಾರ್ಯದರ್ಶಿಗಳಾದ ಸಾರ್ಥಕ ಸೇವರತ್ನ, ಕನ್ನಡ ರಾಜ್ಯೋತ್ಸವ ಪುರಸ್ಕೃತರಾದ ಡಾ. ಜೆ.ಎನ್. ರಾಮಕೃಷ್ಣೇಗೌಡರ ಉಪಸ್ಥಿತಿಯಲ್ಲಿ, ಪೋಷಕರ ಹಾಗೂ ಶಿಕ್ಷಕರ ಮಾರ್ಗದರ್ಶನದೊಂದಿಗೆ ಮಕ್ಕಳಲ್ಲಿರುವ ಸರ್ವಾಂಗೀಣ ಬೆಳವಣಿಗೆಗಾಗಿ ಬಿಜಿಎಸ್ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳಿಗೆ ಪ್ರತಿ ವರ್ಷ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ವೀಡಿಯೋ…
ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುವುದರ ಮೂಲಕ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಹೊಮ್ಮಿಸಲು ಇದೊಂದು ಸುಂದರ ಕಾರ್ಯಕ್ರಮ. ಇಂದಿನ ಕಾರ್ಯಕ್ರಮದಲ್ಲಿ ಪ್ರಾಚೀನ ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ಆಧುನಿಕ ವೈಜ್ಞಾನಿಕ ವಿಜ್ಞಾನ ಮಾದರಿಗಳು, ಆಹಾರ ಮತ್ತು ಕೃಷಿ ಹಾಗೂ ತಂತ್ರಜ್ಞಾನ ಸಂಬಂಧಪಟ್ಟ ವಿಚಾರಗಳಷ್ಟೇ ಅಲ್ಲದೆ ಮಕ್ಕಳಲ್ಲಿರುವ ಸೃಜನಾತ್ಮಕ ಕೌಶಲ್ಯಗಳನ್ನು ಹೊರ ಹಾಕಲು ಸೂಕ್ತವಾದ ವೇದಿಕೆಯನ್ನ ಸಿದ್ಧಪಡಿಸಲಾಗಿತ್ತು.
ವಿದ್ಯಾರ್ಥಿಗಳ ಅವಲೋಕನ ಹೀಗಿತ್ತು ನೋಡಿ…
ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ, ಹಳ್ಳಿಯಿಂದ ದಿಲ್ಲಿಯವರೆಗೆ ಉಪಯೋಗ ಮಾಡಬಹುದಾದ ಸಾಧನಗಳ ಕುರಿತು ಬಂದವರಿಗೆ ವಿವರಣೆ ನೀಡಿದರು.