ಡಿಸಿ ದಿವ್ಯಾ ಪ್ರಭು ಮೇಡಂ… ಮಿಷನ್ ವಿದ್ಯಾಕಾಶಿ ಹಳ್ಳ ಹಿಡಿಸಲು DDPI “ಟೀಚರ್ ಸ್ಪೋರ್ಟ್ಸ್”….!!!

ಧಾರವಾಡ: ರಾಜ್ಯದಲ್ಲಿ ವಿದ್ಯಾಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಧಾರವಾಡವನ್ನ ಮತ್ತಷ್ಟು ವಿದ್ಯೆಯಲ್ಲಿ ಕಂಗೊಳಿಸಬೇಕೆಂಬ ಬಯಕೆಯಿಂದ “ಮಿಷನ್ ವಿದ್ಯಾಕಾಶಿ” ಎಂಬ ಕಾರ್ಯಕ್ರಮವನ್ನ ಆರಂಭಿಸಿದ್ದು, ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಆದರೆ, ಧಾರವಾಡ ಜಿಲ್ಲೆಯ ಡಿಡಿಪಿಐ ಈ ಬಗ್ಗೆ ಎಷ್ಟೊಂದು ಗಂಭೀರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಮಾತ್ರ ಸೋಜಿಗ ಮೂಡಿಸತೊಡಗಿದೆ.
ಹೌದು… ಧಾರವಾಡ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಾರಾ ಅಥವಾ ಏನೇ ಮಾಡಿದರೂ ನಡೆಯತ್ತೆ ಎಂಬ ಮನೋಭಾವನೆ ಬೆಳೆಸಿಕೊಂಡಿದ್ದಾರಾ ಎಂಬ ಸತ್ಯವನ್ನ ಜಿಲ್ಲಾಡಳಿತ ಅರಿತುಕೊಳ್ಳಬೇಕಿದೆ.
ಧಾರವಾಡ ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ಮಾರ್ಚ್ 11 ರಂದು ಆರ್.ಎನ್.ಶೆಟ್ಟಿ ಮೈದಾನದಲ್ಲಿ ಆಟೋಟಗಳನ್ನ ಏರ್ಪಡಿಸಲು ಡಿಡಿಪಿಐ ಸೂಚನೆ ನೀಡಿದ್ದಾರಂತೆ. ಮಾರ್ಚ್ 12ಕ್ಕೆ 8ನೇ ತರಗತಿಗೆ ದೈಹಿಕ ಶಿಕ್ಷಣ ಪರೀಕ್ಷೆಯಿದೆ. ಇದಾದ ಐದೇ ದಿನಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಲಿದೆ. ಆದರೂ, ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರಿಗೆ ಆಟೋಟ ಆಯೋಜನೆ ಮಾಡಲಾಗಿದೆ.
ಇದಕ್ಕೆ ನಿಜವಾದ ಕಾರಣ ಸರಕಾರದಿಂದ ಬಂದಿರುವ ಹಣ ಮರಳಿ ಹೋಗಬಹುದೆಂಬ ಆತಂಕ. ಹೆಂಗಿದೆ ವ್ಯವಸ್ಥೆ. ಡಿಸಿ ದಿವ್ಯಾ ಪ್ರಭು ಮೇಡಂ ಇನ್ನೂ ಎಷ್ಟು ಸಹಿಸಿಕೊಳ್ಳುತ್ತಾರೋ.. ದೇವರೇ ಬಲ್ಲ…
ಉಡುಪಿ, ಹಾವೇರಿ, ಬೆಳಗಾವಿ ಜಿಲ್ಲೆಯಲ್ಲಿ ಮೊದಲ ವಾರದಲ್ಲಿ ಶಿಕ್ಷಕರಿಗಾಗಿ ಆಟೋಟ ಆಯೋಜನೆ ಮಾಡಲಾಗಿದೆ. ಇಲ್ಲಿ ಮಾತ್ರ ಪರೀಕ್ಷೆ ಇದ್ದಾಗಲೇ…