ಸರಕಾರಿ ಶಾಲೆ ಗೇಟು ಬಿದ್ದು ವಿದ್ಯಾರ್ಥಿ ಸಾವು: ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಭೇಟಿ
1 min readಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಹೊಸಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೇಟು ಮುರಿದು ಬಿದ್ದು, ವಿದ್ಯಾರ್ಥಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಕಳೆದ ಮೂರು ದಿನದ ಹಿಂದೆ ಜೆಲಾನಿ ಹೆಂಟಲಗಾರ ಎಂಬ ಎರಡನೇಯ ತರಗತಿ ವಿದ್ಯಾರ್ಥಿ ಆಟವಾಡುತ್ತಿದ್ದಾಗ ಕಬ್ಬಿಣದ ಗೇಟ್ ಮೇಲೆ ಬಿದ್ದು ಸಾವನ್ನಪ್ಪಿದ್ದ. ಘಟನೆಗೆ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ವಿಷಾದವ್ಯಕ್ತಪಡಿಸಿದರು. ಕುಟುಂಬದವರಿಗೆ ಸಾಂತ್ವನ ಹೇಳಿದರು.
ತದನಂತರ ಶಾಲೆಗೆ ತೆರಳಿ ಘಟನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಕ್ಷೇತ್ರ ಶಿಕ್ಷಣಾಧಿಕಾರಿ ಬಿಇಒ ಐ ಬಿ ಬೆನಕೊಪ್ಪರವರಿಂದ ಪಡೆದು, ಇಂತಹ ಘಟನೆಗಳು ನಡೆಯದಂತೆ ಮೊದಲೇ ಸೂಕ್ತವಾದ ಕ್ರಮಗಳನ್ನ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೃತ ವಿದ್ಯಾರ್ಥಿಯ ಪಾಲಕ ಇರ್ಷಾದ ಜೊತೆ ಮಾತನಾಡಿದ ಈರಣ್ಣ ಜಡಿಯವರು, ಸಿಎಂ ಜೊತೆ ಮಾತನಾಡಿ ಪರಿಹಾರದ ಬಗ್ಗೆ ಸೂಕ್ತ ಕ್ರಮವನ್ನ ಜರುಗಿಸುವುದಾಗಿ ಭರವಸೆ ನೀಡಿದರು. ಕುಟುಂಬದಲ್ಲಿ ಮಗುವಿಲ್ಲದ ಬಗ್ಗೆ ಧೈರ್ಯ ತೆಗೆದುಕೊಳ್ಳಿ ಎಂದು ಜಡಿ ಹೇಳಿದರು. ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಇದ್ದರು.