ಧಾರವಾಡದ ಬೇಲೂರು ಬಳಿ ಕಂಕುಳಲಿದ್ದ ಮಗುವಿನ ಜೊತೆ ತಾಯಿ ದುರ್ಮರಣ- ಕಣ್ಣೀರಿಟ್ಟ ತಂದೆ…
1 min read
ಧಾರವಾಡ ಬಳಿ ಭೀಕರ ಅಪಘಾತ: ತಾಯಿ-ಮಗು ಸ್ಥಳದಲ್ಲೇ ಸಾವು..
ಧಾರವಾಡ: ದಂಪತಿಗಳು ಹೋಗುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮಹಿಳೆ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಬೇಲೂರು ಕೈಗಾರಿಕಾ ಪ್ರದೇಶದ ಬಳಿಯಲ್ಲಿ ನಡೆದಿದೆ.
ಧಾರವಾಡದಿಂದ ಬೆಳಗಾವಿ ಕಡೆಗೆ ಹೊರಟಿದ್ದ ಬೈಕ್ ಗೆ ಧಾರವಾಡದ ಬೇಲೂರು ಬಳಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮಹಿಳೆ ಹಾಗೂ 1 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಚಾಲನೆ ಮಾಡುತ್ತಿದ್ದ ಸವಾರನಿಗೆ ಅಲ್ಪಸ್ವಲ್ಪ ಗಾಯವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಗರಗ ಠಾಣೆಯ ಪೊಲೀಸರು ಭೇಟಿ ನೀಡಿ ಮೃತಪಟ್ಟ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡು ಅಪಘಾತ ಮಾಡಿ ಪರಾರಿಯಾದ ವಾಹನದ ಪತ್ತೆಗೆ ಮುಂದಾಗಿದ್ದಾರೆ.