ಅಪಘಾತ ಮೂವರ ದುರ್ಮರಣ- ರಸ್ತೆಯುದ್ದಕ್ಕೂ ಬಿದ್ದ ಪತಿ-ಪತ್ನಿ-ಮಗು
ಬೆಳಗಾವಿ: ಸಕ್ಕರೆ ಕಾರ್ಖಾನೆಗೆ ಹೋಗುತ್ತಿದ್ದ ಟ್ರ್ಯಾಕ್ಟರವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಗೋಕಾಕ ಪಟ್ಟಣದಲ್ಲಿ ಸಂಭವಿಸಿದೆ.
ನಿರಂತರವಾಗಿ ಕಬ್ಬಿನ ಕಟಾವು ಆರಂಭವಾಗಿದ್ದು, ಟ್ರ್ಯಾಕ್ಟರಗಳು ನಿರಂತರವಾಗಿ ಸಂಚರಿಸುವ ಮಧ್ಯದಲ್ಲೇ ದ್ವಿಚಕ್ರವಾಹನ ಮುಂದೆ ಹೋಗುತ್ತಿದ್ದಾಗ, ಟ್ರ್ಯಾಕ್ಟ್ ಡಿಕ್ಕಿ ಹೊಡೆದಿದ್ದು, ಮೃತರೆಲ್ಲರೂ ಹಿಡಕಲ್ ಗ್ರಾಮದವರೆಂದು ತಿಳಿದು ಬಂದಿದೆ.
ಗೋಕಾಕ ತಾಲೂಕಿನ ಜತ್ತ್- ಜಾಂಬೋಟಿ ರಾಜ್ಯ ಹೆದ್ದಾರಿಯ ಸಂಗನಕೇರಿ ಬಳಿ ಶನಿವಾರ ಈ ದುರ್ಘಟನೆ ಸಂಭವಿಸಿದೆ. ಪತಿ-ಪತ್ನಿ ಮಗುವಿನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಕಬ್ಬು ತುಂಬಿದ ಟ್ರ್ಯಾಕ್ಟರ್- ಬೈಕ್ ಮಧ್ಯೆ ಈ ಅಪಘಾತ ಸಂಭವಿಸಿದೆ.
ಘಟಪ್ರಭಾ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮೃತರ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಶವಗಳನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಟ್ರ್ಯಾಕ್ಟರ್ ಚಾಲಕನನ್ನ ವಶಕ್ಕೆ ಪಡೆಯಲಾಗಿದೆ.
ಅಪಘಾತ ಟ್ರ್ಯಾಕ್ಟರ್ ಮತ್ತು ಬೈಕ್ ನಡೆದಿದ್ದರೂ ಕ್ರೂಸರ್ ಕೂಡಾ ಜಖಂಗೊಂಡಿದ್ದು, ಇದು ಸರಣಿ ಅಫಘಾತವಾ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಘಟನೆಯಲ್ಲಿ ಪತಿ-ಪತ್ನಿಯ ಜೊತೆ ಐದು ತಿಂಗಳು ಮಗು ಕೂಡಾ ಸಾವನ್ನಪ್ಪಿದೆ.