Posts Slider

Karnataka Voice

Latest Kannada News

18 ಲಕ್ಷ ವೆಚ್ಚದ ಕುಡಿಯುವ ನೀರಿನ ಕಾಮಗಾರಿಗೆ ಸಚಿವ ಜಗದೀಶ ಶೆಟ್ಟರ್ ಚಾಲನೆ

1 min read
Spread the love

ಹುಬ್ಬಳ್ಳಿ: ಹುಬ್ಬಳ್ಳಿ ಸನ್ ಸಿಟಿ ಹೆರಿಟೇಜ್ ಏರಿಯಾದ 150 ಮನೆಗಳಿಗೆ ಕುಡಿಯುವ ನೀರಿನ ಪೈಪ್ ಲೈನ್ ಜೋಡಣೆ ಕಾಮಗಾರಿಗೆ ಸಚಿವ ಜಗದೀಶ್ ಶೆಟ್ಟರ್ ಭೂಮಿಪೂಜೆ ನೆರವೇರಿಸಿದರು.

ಸನ್ ಸಿಟಿ ಹೆರಿಟೇಜ್ ವತಿಯಿಂದ ನಿವೇಶನ ಅಭಿವೃದ್ಧಿ ಸಮಯದಲ್ಲಿ ಪೈಪ್ ಲೈನ್ ಗಳ ಅಳವಡಿಕೆ ಮಾಡಲಾಗಿತ್ತು. ಸದ್ಯ ಈ ಪೈಪ್ ಲೈನ್‌ಗಳು ಹಾಳಾಗಿರುವುದರಿಂದ, 18 ಲಕ್ಷ ರೂಪಾಯಿ ಶಾಸಕರ ಅನುದಾನದಲ್ಲಿ 1700 ಮೀಟರ್ ಕುಡಿಯುವ ನೀರಿನ ಹೊಸ ಕೊಳವೆ ಮಾರ್ಗ ನಿರ್ಮಿಸಲಾಗುತ್ತಿದೆ. 150 ಮನೆಗಳಿಗೆ ನಳ ಸಂಪರ್ಕ ಒದಗಿಸಲಾಗುವುದು. ಭೂಮಿ ಪೂಜೆ ನೆರವೇರಿಸಿದ ಸಚಿವರ ಶೀಘ್ರವಾಗಿ ಕಾಮಗಾರಿಯನ್ನು ಪ್ರಾರಂಭಿಸಿ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಜಲಮಂಡಳಿಯ ಸಹಾಯಕ ಅಭಿಯಂತರ ವಿ.ಎ.ಗಿಡ್ಡಲಿಂಗಣ್ಣವರ ಅವರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಲ್ಲಿಕಾರ್ಜುನ ಸಾಹುಕಾರ್ ಸೇರಿದಂತೆ ಇತರರಿದ್ದರು.


Spread the love

Leave a Reply

Your email address will not be published. Required fields are marked *