ಧಾರವಾಡದಲ್ಲೂ ರೈತರ ಹೋರಾಟದ ಬಿಸಿ- ಬಹುತೇಕ ಬಸ್ಗಳು ಬಂದ್, ಜುಬ್ಲಿ ವೃತ್ತ ಕ್ಲೋಸ್…
ಧಾರವಾಡ: ರಾಜ್ಯ ರೈತ ಸಂಘ ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ರೈತರು ಧಾರವಾಡದ ಜುಬ್ಲಿ ವೃತ್ತವನ್ನ ಬಂದ್ ಮಾಡಿದ್ದು, ಬಹುತೇಕ ಲೋಕಲ್ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಕಬ್ಬು ಬೆಳೆಗಾರರ ಸಮಸ್ಯೆಯನ್ನ ಬಗೆಹರಿಸಲು ಕೇಂದ್ರ, ರಾಜ್ಯ ಸರಕಾರ ಸಾಧ್ಯವಾಗಿಲ್ಲ ಎಂದು ಆರೋಪಿಸಿ ರೈತರು ಹೋರಾಟ ನಡೆಸಿದ್ದು, ಇದೀಗ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ.
ಧಾರವಾಡದಲ್ಲಿ ರೈತರ ಹೋರಾಟದಿಂದ ಬಸ್ ಸಂಚಾರ ಅಸ್ತವ್ಯಸ್ತಗೊಂಡಿದೆ. ಪ್ರಯಾಣಿಕರು ಪರದಾಡುವಂತಾಗಿದೆ. ಹಲವರು ಆಟೋಗಳ ಮೂಲಕ ಮನೆಗೆ ತೆರಳುವಂತಾಗಿದೆ. ಶಾಲಾ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
