ನಾಳೆ ಸಂಜೆಯವರೆಗೆ “ಸಿಎಂ ಡಿಕೆಶಿ”ಯವರಿಗೆ ಡೆಡ್‌ಲೈನ್: ನಾಡಿದ್ದಿನಿಂದ ಹೋರಾಟದ ಸ್ವರೂಪ ಬದಲಿ… ” ಪೂಜಾರಿ-ಗುರೂಜಿ”
ನಾಳೆಯ ಸಂಜೆಯವರೆಗೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಉತ್ತರ ನೀಡುವ ಭರವಸೆ ಹೊಂದಿರುವ ರೈತ ಸಮೂಹ
ಬೆಳಗಾವಿ: ಕಬ್ಬು ಬೆಳೆಗಾರರಿಗೆ ಎಸ್‌ಎಪಿ ಕೊಡುವ ಕುರಿತು ನಾಳೆ ಸಂಜೆಯವರೆಗೆ ಘೋಷಣೆ ಮಾಡದೇ ಹೋದಲ್ಲಿ, ಶನಿವಾರದಿಂದ ಹತ್ತರಕಿ ಟೋಲ್ ಬಂದ್, ರಾಜ್ಯದ ಹೆದ್ದಾರಿಗಳನ್ನ ಬಂದ್ ಮಾಡುವುದಾಗಿ ರಾಜ್ಯ ರೈತ ಸಂಘದ ಚುನ್ನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ಅವರು ಎಚ್ಚರಿಕೆ ನೀಡಿದರು.
ಗುರ್ಲಾಪುರದಲ್ಲಿ ಐದು ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಸಾವಿರಾರು ರೈತರು ಭಾಗವಹಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರದ ಮೇಲೆ ಹಾಕುತ್ತ ಕೂಡುವ ಬದಲು, ಮೊದಲು ರಾಜ್ಯದಿಂದ ಸಾವಿರ ರೂಪಾಯಿ ಘೋಷಣೆ ಮಾಡಲಿ ಎಂದರು.
ಶನಿವಾರ ಐವತ್ತು ಲಕ್ಷ ರೈತರು ಸೇರುವ ಮೂಲಕ ಸರಕಾರವನ್ನ ಎಚ್ಚರಿಸಬೇಕೆಂದು ಇಬ್ಬರು ಪ್ರಮುಖರು ಮನವಿ ಮಾಡಿಕೊಂಡರು.
