Posts Slider

Karnataka Voice

Latest Kannada News

ಮೊರಬದಲ್ಲಿ ಮತ್ತೊಂದು ಪಾಸಿಟಿವ್ ಕೇಸ್: ಧಾರವಾಡ: 183ಕ್ಕೇರಿದ ಸಂಖ್ಯೆ

1 min read
Spread the love

 

ಧಾರವಾಡ: ಜಿಲ್ಲೆಯಲ್ಲಿ ಮತ್ತೆ 05 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
DWD 179 – ಪಿ- 8286 (52 ವರ್ಷ,ಪುರುಷ) , ಇವರು ಧಾರವಾಡ ಸಂಗಮ್ ಟಾಕೀಸ್ ಹತ್ತಿರ ಕೆಂಪಗೇರಿ ಓಣಿಯ ನಿವಾಸಿ. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ( ಐಎಲ್ಐ) ಬಳಲುತ್ತಿದ್ದರು.
DWD 180 – ಪಿ- 8287 (65 ವರ್ಷ,ಮಹಿಳೆ ) , ಇವರು ಹುಬ್ಬಳ್ಳಿ ತಾಲೂಕು ರಾಯನಾಳದ ಬಸಮ್ಮ ಕಾಲನಿ ನಿವಾಸಿ. ಸಂಪರ್ಕ ಪತ್ತೆ ಮಾಡಲಾಗುತ್ತಿದೆ.
DWD – 181 ಪಿ- 8288 ( 43 ವರ್ಷ ,ಪುರುಷ) ಹುಬ್ಬಳ್ಳಿ ರಾಮಲಿಂಗೇಶ್ವರ ನಗರದ ನಿವಾಸಿ. ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ( ಐಎಲ್ಐ) ಬಳಲುತ್ತಿದ್ದರು.
DWD 182-ಪಿ-8289 (48 ವರ್ಷ, ಪುರುಷ) ,DWD 183- ಪಿ-8290(40 ವರ್ಷ ,ಮಹಿಳೆ) ಇವರಿಬ್ಬರೂ ನವಲಗುಂದ ತಾಲ್ಲೂಕು ಮೊರಬ ಗ್ರಾಮದ ನಿವಾಸಿಗಳು.ಪಿ-7039 ಅವರೊಂದಿಗೆ ಸಂಪರ್ಕ ಹೊಂದಿದ್ದರು.
*06 ಜನ ಗುಣಮುಖ , ಆಸ್ಪತ್ರೆಯಿಂದ ಬಿಡುಗಡೆ*
ಕೋವಿಡ್ ನಿಂದ ಸಂಪೂರ್ಣ ಗುಣಮುಖರಾಗಿರುವ ಪಿ-6253 ( 37 , ಪುರುಷ) , ಪಿ-6263(46 ,ಪುರುಷ) , ಪಿ-6264( 33, ಮಹಿಳೆ), ಪಿ-6265 (12 ,ಬಾಲಕಿ), ಪಿ-6264 (33, ಮಹಿಳೆ) ಹಾಗೂ ಪಿ-6269 (28,ಪುರುಷ) ಈ ಆರು ಜನರನ್ನು ಜೂನ್ 19 ರಂದು ಕಿಮ್ಸ್ ನಿಂದ ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 183 ಕ್ಕೇರಿದೆ. 62 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *