ಶಿಕ್ಷಕರ ಚುನಾವಣೆ ಘೋಷಣೆ- ವೇಳಾಪಟ್ಟಿಯ ಜೊತೆಗೆ ಮಾಹಿತಿಯಿಲ್ಲಿದೆ ನೋಡಿ..
1 min read
ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗಿದ್ದ ತಡೆಯಾಜ್ಞೆಯ ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿರುವ ಬೆನ್ನಲ್ಲೇ ಇದೇ ಡಿಸೆಂಬರ್ 9ರಿಂದ ಚುನಾವಣೆ ಪ್ರಕ್ರಿಯೆ ನಡೆಸಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಚುನಾವಣಾಧಿಕಾರಿಗಳು ಮುಂದಾಗಿದ್ದಾರೆ.
ತಾಲೂಕು ಕಾರ್ಯಕಾರಿ ಸಮಿತಿ ಚುನಾವಣೆಗಳು ಡಿಸೆಂಬರ್ 09ರಿಂದ ಡಿಸೆಂಬರ್ 15ರ ವರೆಗೆ ನಡೆಯಲಿದೆ. ತಾಲೂಕು, ಜಿಲ್ಲಾ, ರಾಜ್ಯ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ಡಿಸೆಂಬರ್ 19ರಿಂದ ಆರಂಭವಾಗಿ ಡಿಸೆಂಬರ್ 29ಕ್ಕೆ ಅಂತ್ಯಗೊಳ್ಳಲಿದೆ ಎಂಬ ವೇಳಾಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ.
ಈ ಹಿಂದೆ ಚುನಾವಣೆಗಳು ಘೋಷಣೆಯಾಗಿ ನಾಮಪತ್ರ ನಡೆಯುತ್ತಿದ್ದಾಗಲೇ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಚುನಾವಣೆಯನ್ನ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಇದೀಗ ಮತ್ತೆ ವೇಳಾಪಟ್ಟಿ ಪ್ರಕಟವಾಗಿರುವುದು ಶಿಕ್ಷಕರ ಸಂಘದ ಚುನಾವಣೆಯ ಕಾವು ಮತ್ತೆ ಏರಲಿದೆ.
ಪರಿಷ್ಕೃತ ವೇಳಾಪಟ್ಟಿಯನ್ನ ಪ್ರಕಟಿಸಿರುವ ಕ್ರಮವನ್ನ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹಾಗೂ ಅವರ ಸಂಘ ಸ್ವಾಗತಿಸಿದ್ದು, ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಮುಂದಾಗುವ ಆಲೋಚನೆ ಹೊಂದಿದ್ದಾರೆ.