ಬಿಜೆಪಿ-ಕಾಂಗ್ರೆಸ್ಸಿಂದ ‘ಎಳೆದಾಡಿಲ್ಪಟ್ಟಿದ್ದ’ ಉಪಸಭಾಪತಿ ಆತ್ಮಹತ್ಯೆ
1 min read
ಚಿಕ್ಕಮಗಳೂರು: ಹುಬ್ಬಳ್ಳಿಯಿಂದ ಗೆಳೆಯರೊಬ್ಬರನ್ನ ಕರೆದುಕೊಂಡು ಬರಲು ಹೋಗುವುದಾಗಿ ಮನೆಯಿಂದ ಹೊರಟಿದ್ದ ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರ ಮೃತದೇಹ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಬಳಿಯ ರೇಲ್ವೆ ಹಳಿಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಸೋಮವಾರ ಸಂಜೆ ಸಖರಾಯಪಟ್ಟಣದ ಬಳಿಯ ತೋಟದ ಮನೆಯಿಂದ ಕಾರಿನಲ್ಲಿ ಹೋಗಿದ್ದ ಧರ್ಮೆಗೌಡರು ಮರಳಿ ಬಂದಿರಲಿಲ್ಲ. ಹೀಗಾಗಿ ಮನೆಯವರೆಲ್ಲರೂ ಹುಡುಕಾರಿದ್ದಾರೆ. ಆದರೆ, ಗುಣಸಾಗರ-ಕಬ್ಳಿ ಮಾರ್ಗದ ಮಧ್ಯೆ ತಡರಾತ್ರಿ ಶವ ದೊರಕಿದೆ.
ಉಪಸಭಾಪತಿ ಧರ್ಮೇಗೌಡರ ಮೃತದೇಹದ ಜೊತೆ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ವಿಧಾನಪರಿಷತ್ ನಲ್ಲಿ ನಡೆದಿದ್ದ ಘಟನೆಯ ಉಲ್ಲೇಖವೂ ಇದೆ ಎನ್ನಲಾಗಿದೆ. ಈಚೆಗೆ ವಿಧಾನಪರಿಷತನಲ್ಲಿ ನಡೆದ ಘಟನೆಯಿಂದ ಮೃತರು ಸಾಕಷ್ಟು ನೊಂದುಕೊಂಡಿದ್ದರೆಂದು ಹೇಳಲಾಗಿದೆ.
ಮನೆಯಿಂದ ಚಾಲಕನ ಸಮೇತ ಬಂದಿದ್ದ ಧರ್ಮೇಗೌಡರು, ಗುಣಸಾಗರ ರೈಲು ಹಳಿಯ ಸಮೀಪ ಕಾರು ನಿಲ್ಲಿಸಿ, ನೀವು ಇಲ್ಲೇ ಇರು ಖಾಸಗಿಯಾಗಿ ಬೇರೆಯವರ ಜೊತೆ ಮಾತಾಡಬೇಕಿದೆ ಎಂದು ಹೇಳಿ ಹೋದವರು ಮರಳಿ ಬಂದಿಲ್ಲ.