ನವಲಗುಂದದಲ್ಲಿ ಕಾಂಗ್ರೆಸ್ಸನ ಬಿಜೆಪಿಗೆ ಮರ್ಜ್ ಮಾಡ್ರೀ: ಜೆಡಿಎಸ್ ಮಾಜಿ ಶಾಸಕ ಕೋನರೆಡ್ಡಿ
1 min read
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ಕ್ಷೇತ್ರದಲ್ಲಿ ಮಾತ್ರ ಭಾರತೀಯ ಜನತಾ ಪಕ್ಷದಲ್ಲಿ ಕಾಂಗ್ರೆಸ್ ಪಕ್ಷವನ್ನ ವಿಲೀನ ಮಾಡಿಬಿಡಿ ಎಂದು ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಕಿಡಿಕಾರಿದ್ದಾರೆ.
ನವಲಗುಂದ ಕ್ಷೇತ್ರದಲ್ಲಿ ಸದಾಕಾಲ ಕಾಂಗ್ರೆಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡು ಬರುತ್ತಿದೆ. ಜೆಡಿಎಸ್ ಪಕ್ಷದ ವರ್ಚಸ್ಸನ್ನ ಕಡಿಮೆ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಿಕೊಂಡು ಬರಲಾಗುತ್ತಿದೆ. ಹೀಗಾಗಿ ಪಕ್ಷವನ್ನ ಇನ್ನೊಂದು ಪಕ್ಷದಲ್ಲಿ ಮರ್ಜ್ ಮಾಡಿಬಿಡಿ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯ ದಿನ ಕಾಂಗ್ರೆಸ್ ನೊಂದಿಗೆ ಮೈತ್ರಿಯಾಗುವ ಭರವಸೆ ಹೊಂದಿದ್ದೆ. ಮಾಜಿ ಸಿಎಂ ಸಿದ್ಧರಾಮಯ್ಯ ಜೊತೆಗೂ ಮಾತನಾಡಿದ್ದೆ. ಆದರೆ, ಸ್ಥಳೀಯ ನಾಯಕರೇ ಹೊಂದಾಣಿಕೆ ಆಗಲಿಲ್ಲ ಎಂದು ತಿಳಿಸಿದರು.
9 ಜೆಡಿಎಸ್ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿಯನ್ನ ಹೊಂದಿದ್ದ ಜೆಡಿಎಸ್ ಕೊನೆಯ ಕ್ಷಣದವರೆಗೂ ಅಧಿಕಾರದ ಚುಕ್ಕಾಣಿ ಹಿಡಿಯುವ ಭರವಸೆ ಭರವಸೆಯಾಗಿಯೇ ಉಳಿದಿದ್ದರಿಂದ ಇನ್ನುಳಿದ ಎರಡು ಪಕ್ಷಗಳ ಬಗ್ಗೆ ಕೋನರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.