ಗ್ಯಾಂಗ್ ಕಟ್ಟುವ ಖಯಾಲಿಯಲ್ಲಿ ನಡೆದಿತ್ತು ಬೈರಗೊಂಡನ ಮೇಲೆ ದಾಳಿ: ಐಜಿಪಿ ಹೇಳಿದ್ದೇನು
1 min readವಿಜಯಪುರ: ಭೀಮಾತೀರದ ಮಹಾದೇವ ಭೈರಗೊಂಡ ಅಲಿಯಾಸ್ ಮಹದೇವ ಸಾವುಕಾರ ಮೇಲೆ ಫೈರಿಂಗ್ ಪ್ರಕರಣದಲ್ಲಿ ಮಹತ್ವದ ಸುಳಿವು ದೊರಕಿದ್ದು, ಸಾಹುಕಾರನ ಕಾರಿಗೆ ಗುದ್ದಿದ ಟಿಪ್ಪರ ಚಾಲಕ ಹಾಗೂ ಮಾಹಿತಿ ನೀಡಿದ ಆರೋಪಿಯನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಟಿಪ್ಪರ್ ಚಾಲಕ ಉಮರಾಣಿಯ ನಾಗಪ್ಪ ಪೀರಗೊಂಡ, ಸಾಹುಕಾರ್ ಬಗ್ಗೆ ಮಾಹಿತಿ ನೀಡಿದ ವಿಜಂತು ತಾಳಿಕೋಟೆ ಬಂಧಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಹಳೆಯ ದ್ವೇಷ ಹಾಗೂ ಗ್ಯಾಂಗ್ ಕಟ್ಟಿಕೊಳ್ಳುವ ಖಯಾಲಿಯಿಂದಾಗಿ ಈ ಕೃತ್ಯಗೈದಿದ್ದು, ಪ್ರಮುಖವಾಗಿ ಗ್ಯಾಂಗ್ ಕಟ್ಟಬೇಕೆಂಬ ಮೋಹದಿಂದಾಗಿ ಮಡಿವಾಳ ಹಿರೇಮಠ ಸ್ವಾಮಿ ಎನ್ನುವ ಕೇಂದ್ರ ವ್ಯಕ್ತಿಯಾಗಿದ್ದು, ಆತನು ಸಹ ಈ ಕೃತ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಕಳೆದ ಆರೇಳು ತಿಂಗಳುಗಳಿಂದ ಪುಣೆ ಮೊದಲಾದ ಕಡೆಗಳಲ್ಲಿ ಯುವಕರನ್ನು ಕಟ್ಟಿಕೊಂಡು, ಫೈನಾನ್ಸ್ ನಡೆಸಿ ಯುವಕರಿಗೆ ದಾರಿ ತಪ್ಪಿಸಿ ಗ್ಯಾಂಗ್ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾನೆ ಎಂದರು..
ಇನ್ನು ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಹಳೆಯ ಸಹಚರರು ಈ ಕೃತ್ಯದಲ್ಲಿ ಭಾಗಿಯಾಗಿದ್ದು ತನಿಖೆಯಲ್ಲಿ ತಿಳಿದುಬಂದಿದೆ. ಸಾಹುಕಾರ್ ಮೇಲೆ ದಾಳಿ ಯೋಜನೆಯನ್ನು ಆರೋಪಿಗಳು ಹಾಕಿದ್ರೂ, ಆದ್ರೇ, ಎಲ್ಲ ಯೋಜನೆ ವಿಫಲವಾಗಿದವು, ನವೆಂಬರ್ 2 ರಂದು ಕೃತ್ಯವೈಸಗಲು ಯಶಸ್ವಿಯಾಗಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಹಲವು ಶಾಮೀಲಾಗಿದ್ದಾರೆ. ಅವರನ್ನು ಆದಷ್ಟು ಬೇಗನೇ ಬಂಧಿಸಲಾಗಿವುದು ಎಂದು ಐಜಿಪಿ ಸುಹಾಸ್ ಮಾಹಿತಿ ನೀಡಿದರು.