ಕುಟುಂಬವನ್ನೇ ನಾಶ ಮಾಡಲು ಬಂದಿದ್ದ ಕಿರಾತಕ ಹೇಗಿದ್ದಾನೆ ಗೊತ್ತಾ..?
1 min read
ಹುಬ್ಬಳ್ಳಿ: ವಾಣಿಜ್ಯನಗರದಲ್ಲಿನ ಗೃಹ ಸಚಿವರ ನಿವಾಸದಿಂದ ಕೆಲವೇ ಅಂತದರಲ್ಲಿರುವ ಲಿಂಗರಾಜನಗರದ ಮನೆಯಲ್ಲಿ ಕಾನೂನು ವಿಶ್ವವಿದ್ಯಾಲಯದ ಪ್ರಾಂಶುಪಾಲರ ಕುಟುಂಬವನ್ನ ಸರ್ವನಾಶ ಮಾಡಲು ಬಂದಿದ್ದ ಆರೋಪಿಯ ಭಾವಚಿತ್ರ ಕರ್ನಾಟಕವಾಯ್ಸ್.ಕಾಂಗೆ ಲಭ್ಯವಾಗಿದೆ.
ಸಂತೋಷ ಜಿ.ಎಸ್. ಎನ್ನುವ ಈತ ಶಂಕರ ಮುಶಣ್ಣನವರ ಎಂಬುವವರ ಮಗಳಾದ ಲತಾರನ್ನ ಮದುವೆಯಾಗಿದ್ದ. ಮದುವೆಯಾದ ಹೊಸತರಲ್ಲಿ ಚೆನ್ನಾಗಿಯೇ ಇದ್ದ ಸಂತೋಷ, ನಂತರದ ದಿನಗಳಲ್ಲಿ ಮನೆಯಲ್ಲಿ ಅಸಂತೋಷನವನ್ನ ಕ್ರಿಯೇಟ್ ಮಾಡತೊಡಗಿದ.
ಗಂಡನ ಮನಸ್ಸು ಬದಲಾಗಿದೆ ಎಂದುಕೊಂಡು ಪತಿಯ ಮನೆಯಿಂದ ಹೊರಗೆ ಬಂದ ಲತಾ, ಪತಿಯ ಬಗ್ಗೆ ಮನಸ್ಸಿಂದಲೂ ಹೊರಗೆ ಹಾಕಿ ಮಕ್ಕಳ ಜೊತೆ ತವರು ಮನೆಯಲ್ಲೇ ಇರತೊಡಗಿದರು. ಶಂಕರ ಮುಶಣ್ಣನವರ ನಿವೃತ್ತ ಪ್ರಾಂಶುಪಾಲರಾಗಿದ್ದರಿಂದ ಯಾವುದೇ ತೊಂದರೆಯಿಲ್ಲದೇ ಜೀವನ ಸಾಗಿತ್ತು.
ಸಂತೋಷ ಮಾತ್ರ ಸುಮ್ಮನೆ ಕೂಡುವ ಆಸಾಮಿ ಆಗಿರಲೇ ಇಲ್ಲ. ಪತ್ನಿಯ ಸಲುವಾಗಿ ಚಾಕುವನ್ನ ಹಿಡಿದುಕೊಂಡು ಮಾವನನ್ನ ಮುಗಿಸಲು ಆಗಾಗ ಮುಂದಾಗುತ್ತಿದ್ದ. ಆದರೆ, ಹಿರಿಯರು ಹೇಳಿದಾಗ ಮತ್ತೆ ಸುಮ್ಮನೆ ಹೋಗುತ್ತಿದ್ದ. ಹಾಗಾಗಿ ಸಂತೋಷ ಇಂತಹ ದುಷ್ಟತನಕ್ಕೆ ಇಳಿಯೋದಿಲ್ಲವೆಂದುಕೊಂಡು ಎಲ್ಲರೂ ವಿಷಯವನ್ನ ನೆಗ್ಲೆಕ್ಟ್ ಮಾಡಿದ್ರು. ಆದರೆ, ಕಿರಾತಕ ಸಂತೋಷ ಬೆಳಗಿನ ಜಾವವೇ ಮಾವನನ್ನ ಮುಗಿಸಿ, ಅತ್ತೆ ಸಾವು ಬದುಕಿನ ನಡುವೆ ಬದುಕುವಂತೆ ಮಾಡಿದ್ದಾನೆ.
ದೊಡ್ಡವರ ಮನೆಯಲ್ಲಿನ ರಗಳೆಗಳು ಇಂತಹ ದುಷ್ಟತನಕ್ಕೆ ಇಳಿದು ಸಮಾಜವೇ ತಲೆತಗ್ಗಿಸುವಂತೆ ಮಾಡುತ್ತವೆ ಎನ್ನುವುದಕ್ಕೆ ಇದೊಂದು ಉದಾಹರಣೆ.