ಕಮಡೊಳ್ಳಿ-ಹಂಚಿನಾಳ ಬಳಿ ದುರ್ಘಟನೆ: ಯುವಕನ ಸ್ಥಿತಿ ಗಂಭೀರ
1 min read
ಧಾರವಾಡ: ಸರಿಯಾದ ರಸ್ತೆ ರಿಫೇರಿಯಾಗದ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಯುವಕನೋರ್ವ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕಮಡೊಳ್ಳಿ-ಹಂಚಿನಾಳ ರಸ್ತೆಯಲ್ಲಿ ನಡೆದಿದೆ.
ಘಟನೆಯಲ್ಲಿ ಚಂದ್ರಶೇಖರ ರೊಟ್ಟಿ ಎಂಬ ಯುವಕನೇ ತೀವ್ರವಾಗಿ ಗಾಯಗೊಂಡಿದ್ದು, ತಲೆ ಹಾಗೂ ಕಣ್ಣೀಗೆ ಬಲವಾದ ಗಾಯಗಳಾಗಿವೆ. ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಯುವಕನನ್ನ ದಾರಿ ಹೋಕರು ಆಸ್ಪತ್ರೆಗೆ ರವಾನೆ ಮಾಡಿದ್ದು, ಹುಬ್ಬಳ್ಳಿಯ ಕಿಮ್ಸಗೆ ದಾಖಲು ಮಾಡಲಾಗಿದೆ.
ಕಮಡೊಳ್ಳಿಯಿಂದ ಹಂಚಿನಾಳಗೆ ಹೊರಟಿದ್ದ ಚಂದ್ರಶೇಖರ, ರಸ್ತೆ ದುರಸ್ತಿಯಲ್ಲಿದೆ ಎಂದರೂ ಅದೇ ರಸ್ತೆಯಲ್ಲಿ ಹೊರಟಿದ್ದ. ಪ್ರತಿದಿನವೂ ಇದೇ ಮಾರ್ಗವಾಗಿ ಸಂಚಾರಿಸುತ್ತಿದ್ದರಿಂದ, ಕಾನ್ಪಿಡೆನ್ಸನಿಂದ ಹೊರಟಿದ್ದ. ಆದರೆ, ಟೈರಗೆ ಕಲ್ಲು ತಾಗಿದ್ದರಿಂದ ಆಯತಪ್ಪಿ ಬೈಕ್ ಸಮೇತ ಕೆಳಕ್ಕುಳಿದ್ದ.
ಕಿಮ್ಸನಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಯುವಕನಿಗೆ ತೀವ್ರ ಥರದ ಗಾಯಗಳಾಗಿವೆ. ಈ ಕುರಿತು ಕುಂದಗೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.