ಹುಬ್ಬಳ್ಳಿ ಎಸಿಪಿ- ಧಾರವಾಡ ಡಿವೈಎಸ್ಪಿ ವರ್ಗಾವಣೆ: ಮುಕ್ತೆದಾರ-ಸಂಕದ ಹೊಸ ಅಧಿಕಾರಿಗಳು
1 min read
ಬೆಂಗಳೂರು: 33 ಡಿವೈಎಸ್ಪಿಗಳ ವರ್ಗಾವಣೆಯನ್ನ ಮಾಡಿ ಸರಕಾರ ಆದೇಶ ಹೊರಡಿಸಿದ್ದು, ಹುಬ್ಬಳ್ಳಿ ಉತ್ತರ ಉಪ ವಿಭಾಗದ ಎಸಿಪಿ ಹಾಗೂ ಧಾರವಾಡ ಗ್ರಾಮೀಣ ಉಪವಿಭಾಗದ ಡಿವೈಎಸ್ಪಿ ವರ್ಗಾವಣೆಯಾಗಿದೆ.
ಹುಬ್ಬಳ್ಳಿ ಉತ್ತರ ವಿಭಾಗದ ಎಸಿಪಿಯಾಗಿದ್ದ ಶಂಕರ ರಾಗಿ ಅವರನ್ನ ನರಗುಂದ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಹಾವೇರಿ ಡಿಸಿಆರ್ ಬಿಯಲ್ಲಿದ್ದ ವಿನೋದ ಮುಕ್ತೆದಾರ ಅವರನ್ನ ವರ್ಗಾವಣೆ ಮಾಡಲಾಗಿದೆ.
ಧಾರವಾಡ ಉಪವಿಭಾಗದ ಡಿವೈಎಸ್ಪಿಯಾಗಿದ್ದ ರವಿ ಡಿ.ನಾಯ್ಕ ಅವರನ್ನ ಶಿರಸಿ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಳಕ್ಕೆ ಇಂಡಿ ಉಪವಿಭಾಗದದಲ್ಲಿ ಡಿವೈಎಸ್ಪಿಯಾಗಿದ್ದ ಮಡಿವಾಳೆಪ್ಪ ಸಂಕದ ಅವರನ್ನ ವರ್ಗಾವಣೆ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಈಗಾಗಲೇ ಓಓಡಿ ಮೇಲೆ ಡಿಸಿಪಿ ಬಂದಿದ್ದು, ಸಧ್ಯ ಪೊಲೀಸ್ ಕಮೀಷನರ್ ಹುದ್ದೆಯನ್ನ ಪ್ರಭಾರಿಯಾಗಿ ನಿಭಾಯಿಸಲಾಗುತ್ತಿದೆ.