ಸಿಇಓ ಕೈ ತೊಳೆಸಿದ ಬಿಇಓಗಳು- ಹುಬ್ಬಳ್ಳಿ ತಾಲೂಕು ಪಂಚಾಯತಿಯಲ್ಲಿ ನಡೆದದ್ದೇನು..?
1 min readಹುಬ್ಬಳ್ಳಿ: ಪ್ರತಿಯೊಬ್ಬರು ತಮ್ಮ ದೈನಂದಿನ ಜೀವನದಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸಿ, ರೋಗಗಳು ಹರಡದಂತೆ, ನಿತ್ಯವೂ ಸ್ವಚ್ಛವಾಗಿ ಕೈ ತೊಳೆಯುವುದನ್ನು ರೂಢಿಸಿಕೊಂಡು ಆಚರಣೆಗೆ ತರಬೇಕು ಎಂದು ಧಾರವಾಡ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ.ಬಿ ಹೇಳಿದರು.
ಹುಬ್ಬಳ್ಳಿಯ ತಾಲೂಕಾ ಪಂಚಾಯತಿಯ ಅಕ್ಷರ ದಾಸೋಹ ಕಾರ್ಯಾಲಯದಲ್ಲಿ ವಿಶ್ವ ಕೈತೊಳೆಯುವ ದಿನದ ಅಂಗವಾಗಿ ಸ್ವತಃ ಕೈ ತೊಳೆಯುವ ಹಂತಗಳನ್ನು ಪ್ರದರ್ಶಿಸಿ ಮಾತನಾಡಿ, ಹೆಚ್ಚಿನ ಪ್ರಮಾಣದಲ್ಲಿ ರೋಗಗಳು ಕೈಗಳ ಅನೈರ್ಮಲ್ಯತೆಯಿಂದ ಹರಡುತ್ತಿದ್ದು, ಪ್ರತಿಯೊಬ್ಬರೂ ಸದಾ ಆರೋಗ್ಯಕರ ಅಂಶಗಳನ್ನು ಕಟ್ಟಿನಿಟ್ಟಾಗಿ ಪಾಲಿಸಲು ಹೇಳಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಂ.ಸವದತ್ತಿ, ಹುಬ್ಬಳ್ಳಿ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ್ ಕರಿಕಟ್ಟಿ, ಹುಬ್ಬಳ್ಳಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕುಮಾರ ಸಿಂದಗಿ, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಗಂಗಾಧರ ಕಂದಕೂರ, ಜಿಲ್ಲಾ ಪಂಚಾಯತಿಯ ಯೋಜನಾಧಿಕಾರಿ ವಿ.ಡಿ.ಮೂಗನೂರಮಠ, ಉಪಕಾರ್ಯದರ್ಶಿ ಸುರೇಶ ಕುಂದೂರ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಧರ ಪತ್ತಾರ ಮತ್ತು ತಾಲೂಕಾ ಪಂಚಾಯತಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.