ಶಂಕರ ಮುಗದ ಗೆಲುವು, ಕುಲಕರ್ಣಿಯವರ ಮನೆ, ರಾಜೇಸಾಬನ ಪಟಾಕಿ ಮತ್ತೂ ಇಸ್ಮಾಯಿಲ್ ತಮಾಟಗಾರ… ‘ಒಂದು ಕಿಡಿಯ ಕಥೆ-ವ್ಯಥೆ’…

ಧಾರವಾಡ: ಶಾಸಕ ವಿನಯ ಕುಲಕರ್ಣಿಯವರ ಬಾರಾಕೊಟ್ರಿಯಲ್ಲಿನ ನಿವಾಸದ ಬಳಿ ಪಟಾಕಿ ಹಚ್ಚಿದ ಪ್ರಕರಣವೊಂದು ಉಪನಗರ ಪೊಲೀಸ್ ಠಾಣೆಯ ಮುಂದೆ ಕೆಲಕಾಲ ಗುಸುಮುಸು ಸೃಷ್ಟಿಸಿತ್ತು.
ಆಗಿದ್ದೇನು… ಇಲ್ಲಿದೆ ನೋಡಿ ವೀಡಿಯೋ…
ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಮೂಲದ ಶಂಕರ ಮುಗದ ಅವರ ಗೆದ್ದ ದಿನವೇ ರಾಜೇಸಾಬ ಎಂಬಾತ ಕುಲಕರ್ಣಿಯವರ ಮನೆ ಬಳಿ ಪಟಾಕಿ ಸಿಡಿಸಿದ್ದನಂತೆ. ಆತನನ್ನ ಪತ್ತೆ ಹಚ್ಚಿದ ಪೊಲೀಸರು ಇಂದು ಠಾಣೆಗೆ ಕರೆದುಕೊಂಡು ಹೋಗಿದ್ರು.
ರಾಜೇಸಾಬ ಅಂಜುಮನ್ ಸಂಸ್ಥೆಯ ಪದಾಧಿಕಾರಿಯಾದ ಪರಿಣಾಮ ಸ್ವತಃ ಇಸ್ಮಾಯಿಲ್ ತಮಾಟಗಾರ ಠಾಣೆಗೆ ಬಂದು, ಪರಿಸ್ಥಿತಿಯನ್ನ ತಿಳಿದುಕೊಂಡು, ಏನಾಗಿದೆ ಎಂದು ಮಾಧ್ಯಮಗಳ ಮುಂದೆ ವಿವರಿಸಿದರು.