ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
1 min readಧಾರವಾಡ: ಭಾರತೀಯ ಜನತಾ ಪಕ್ಷದ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆಯನ್ನ ಮುಂದೂಡಿ ಆದೇಶ ಹೊರಡಿಸಲಾಗಿದೆ.
ವಿನಯ ಕುಲಕರ್ಣಿ ಪರವಾಗಿ ಭರತಕುಮಾರ.ವಿ ಎಂಬ ಹೈಕೋರ್ಟ್ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆಯನ್ನ ನಡೆಸಿದ ಧಾರವಾಡದ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು, ನವೆಂಬರ್ 18ಕ್ಕೆ ವಿಚಾರಣೆಯನ್ನು ಮುಂದೂಡಿದರು.
ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿ ವಿಚಾರಣೆಗೆ ನವೆಂಬರ್ 18 ರಂದು ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಸಿಬಿಐಗೂ ನೋಟೀಸ್ ಜಾರಿಯಾಗಲಿದೆ.
ಜಾಮೀನು ನೀಡುವ ಬಗ್ಗೆ ಸಿಬಿಐ ತಕರಾರು ಸಲ್ಲಿಸಲು ಅವಕಾಶವಿದ್ದು, ಮಾಜಿ ಸಚಿವರ ಪ್ರಕರಣವೀಗ, ನವೆಂಬರ್ 18 ರಂದು ಎಲ್ಲರ ಚಿತ್ತವನ್ನ ತನ್ನ ಕಡೆ ಮಾಡಿಕೊಂಡಿದೆ.
ಕಳೆದ ಗುರುವಾರ ಸಿಬಿಐನಿಂದ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಈಗಾಗಲೇ ಮೂರು ದಿನ ಸಿಬಿಐ ಕಸ್ಟಡಿಯಲ್ಲೂ ಇದ್ದು, ಹದಿನಾಲ್ಕು ದಿನದ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.