Posts Slider

Karnataka Voice

Latest Kannada News

ಕೊಹ್ಲಿ- ಅನುಷ್ಕಾರ ಬಾಳಲ್ಲಿ  “ಭಾಗ್ಯಲಕ್ಷ್ಮೀ”

1 min read
Spread the love

ನವದೆಹಲಿ: ಆಸೀಸ್‌ ಸರಣಿಯಿಂದ ಪಿತೃತ್ವ ರಜೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಪತ್ನಿ, ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಸೋಮವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸೋಮವಾರ ಮಧ್ಯಾಹ್ನ ಹೆಣ್ಣು ಮಗುವಿಗೆ ಜನ್ಮವಾಗಿದೆ ಎಂದು ವಿರಾಟ್‌ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಪತ್ನಿ ಅನುಷ್ಕಾ ಹಾಗೂ ಮಗು ಆರೋಗ್ಯವಾಗಿದ್ದು, ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ ದ್ದಾರೆ.

ಮೊದಲ ಮಗುವಿನ ಆಗಮನದ ಕುರಿತು ವಿರುಷ್ಕಾ ಕಳೆದ ಆಗಸ್ಟ್‌ 2020ರಲ್ಲಿ ಹೇಳಿದ್ದರು. ಮಗು ಜನಿಸಿದ ಬಳಿಕವೂ ಸಿನೆಮಾ ಕ್ಷೇತ್ರದಲ್ಲಿ ಮುಂದುವರಿಯುವುದಾಗಿ ಅನುಷ್ಕಾ ಹೇಳಿದ್ದರು.

ಮಗು ಜನಿಸಿದ ನಂತರ ಟ್ವೀಟ್ ಮಾಡಿ, ತಮ್ಮ ಸಂತಸವನ್ನ ಹಂಚಿಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed