ಶಾಲೆಯಲ್ಲೇ ವಿದ್ಯಾಗಮ ಕಾರ್ಯಕ್ರಮ: ಸಂಕ್ರಾತಿಗೆ ಪ್ರಾಥಮಿಕ ತರಗತಿಗೂ ಚಾಲನೆ

ಬೆಂಗಳೂರು: ಹಲವು ವಿವಾದಗಳಿಂದ ತಾತ್ಕಾಲಿಕವಾಗಿ ಬಂದ್ ಆಗಿದ್ದ ವಿದ್ಯಾಗಮ ಕಾಯಕ್ರಮ ಜನೇವರಿ 1ರಿಂದ ಆರಂಭವಾಗಲಿದ್ದು, ಶಾಲೆಯ ಆವರಣದಲ್ಲಿಯೇ ನಡೆಸಲು ಸರಕಾರ ಆದೇಶವನ್ನ ನೀಡಿದೆ. ಇದರಿಂದ ಸಾಕಷ್ಟು ನಿರಾಳತೆ ಕಂಡು ಬರುತ್ತಿದೆ.
6ರಿಂದ 9ನೇ ತರಗತಿವರೆಗೆ ವಿದ್ಯಾಗಮ-2 ಕಾರ್ಯಕ್ರಮ ಜನೇವರಿ ಮೊದಲ ದಿನದಿಂದಲೇ ಆರಂಭವಾಗಲಿದೆ. ಅದಾದ ನಂತರ ಜನೇವರಿ 14ರಿಂದ 1ರಿಂದ 5ನೇ ತರಗತಿಗೂ ವಿದ್ಯಾಗಮ ಆರಂಭಿಸುವಂತೆ ಸೂಚನೆಯನ್ನ ನೀಡಲಾಗಿದೆ.
ಶಾಲೆಗಳನ್ನ ಆರಂಭಿಸುವ ಬಗ್ಗೆ ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯು ಹಲವು ಸೂಚನೆಗಳನ್ನ ನೀಡಿದೆ. ವಿದ್ಯಾಗಮ ಯೋಜನೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಪಾಲಕರ ಅನುಮತಿ ಪತ್ರವನ್ನ ತರುವುದನ್ನ ಕಡ್ಡಾಯ ಮಾಡಲಾಗಿದೆ. ಅಷ್ಟೇ ಅಲ್ಲ, ಶಾಲೆಗೆ ಬರುವ ಮಗುವಿಗೆ ಕೋವಿಡ್-19 ಲಕ್ಷಣಗಳು ಇಲ್ಲದೇ ಇರುವುದನ್ನ ದೃಡಪಡಿಸುವಂತೆಯೂ ತಿಳಿಸಲಾಗಿದೆ.
ಶಿಕ್ಷಕರು ಪ್ರತಿ ದಿನವೂ ಮಕ್ಕಳ ಆರೋಗ್ಯವನ್ನ ನೋಡಿಕೊಂಡಿರಬೇಕು. ಲಕ್ಷಣಗಳು ಕಂಡು ಬಂದರೇ ತಕ್ಷಣವೇ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸುವಂತೆಯೂ ಸೂಚನೆ ನೀಡಲಾಗಿದೆ. ಇದರ ಜೊತೆಗಿರುವ ಸಮಗ್ರ ಮಾಹಿತಿಗಳು ಇಲ್ಲಿವೆ ನೋಡಿ..