ವಿಧಾನಸಭೆಯಲ್ಲಿ ಮಾರ್ಧನಿಸಿದ ಹುಬ್ಬಳ್ಳಿ-ಧಾರವಾಡ “ಫೆಲ್ಯೂವರ್ ಪೊಲೀಸ್ ಕಮೀಷನರ್”- ಶಾಸಕ ಟೆಂಗಿನಕಾಯಿ- ಅಬ್ಬಯ್ಯ ‘ಅದೇ ಮಾತು’….

ಬೆಂಗಳೂರು: ಮಕ್ಕಳು ಮತ್ತು ಬಾಣಂತಿಯರಿಗೆ ನೀಡಬೇಕಾಗಿದ್ದ ಪೌಷ್ಟಿಕಾಂಶ ಆಹಾರವನ್ನ ಕದ್ದು ಮಾರಾಟ ಮಾಡುವ ಪ್ರಕರಣವನ್ನ ತನಿಖೆ ಮಾಡುವ ಸಮಯದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ವಿಫಲರಾಗಿದ್ದಾರೆ ಎಂದು ಆಡಳಿತ ಪಕ್ಷದ ಶಾಸಕ ಪ್ರಸಾದ ಅಬ್ಬಯ್ಯ ವಿಧಾಸಭೆಯಲ್ಲೇ ಅಸಮಾಧಾನ ಹೊರಹಾಕಿದರು.
ಅಧಿವೇಶನದಲ್ಲಿ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅವರು, ಪ್ರಕರಣದ ಬಗ್ಗೆ ಪ್ರಮುಖ ಆರೋಪಿಗಳನ್ನ ಬಂಧಿಸದ ಬಗ್ಗೆ ಪ್ರಶ್ನಿಸುತ್ತಿದ್ದಾಗ, ಎದ್ದು ನಿಂತ ಪ್ರಸಾದ ಅಬ್ಬಯ್ಯ ಅವರು, ಕಮೀಷನರ್ ಬಗ್ಗೆ ಹೀಗಾಡಿದರು.
ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಪ್ರಮುಖ ಆರೋಪಿಗಳನ್ನ ಬಂಧಿಸಲು ಇನ್ನೂ ಆಗದೇ ಇರುವ ಬಗ್ಗೆ ಗಮನ ಸೆಳೆಯಲಾಯಿತು. ಈ ಸಮಯದಲ್ಲಿ ಯಾವುದೇ ರೀತಿಯ ತಪ್ಪು ಆಗದಂತೆ ಕ್ರಮ ವಹಿಸುವ ಜೊತೆಗೆ ಯಾರೇ ಇದ್ದರೂ ಅವರನ್ನ ಬಂಧಿಸಲಾಗುವುದು ಎಂದು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದರು.