Posts Slider

Karnataka Voice

Latest Kannada News

ವೀರಶೈವ-ಲಿಂಗಾಯತ ಅಭಿವೃದ್ಧಿ ಮಂಡಳಿ: ಶಾಸಕ ಮುನೇನಕೊಪ್ಪ ಸೇರಿದಂತೆ 11 ಪ್ರಮುಖರ ನೇಮಕ

1 min read
Spread the love

ಬೆಂಗಳೂರು: ವೀರಶೈವ-ಲಿಂಗಾಯತ ಅಭಿವೃದ್ಧಿ ಮಂಡಳಿಗೆ ನೇಮಕ ಮಾಡಿ ಆದೇಶ ಹೊರಡಿಸಿರುವ ಕರ್ನಾಟಕ ಸರಕಾರ ಮಾಜಿ ಸಂಸದರೂ ಸೇರಿದಂತೆ ಹಲವು ಶಾಸಕರನ್ನ ಆಯ್ಕೆ ಮಾಡಿದ್ದು, ಪಟ್ಟಿಯೂ ಹೊರಬಿದ್ದಿದೆ.

ಮಂಡಳಿಗೆ ಪರಮಶಿವಯ್ಯ ಅವರನ್ನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ವೀರಣ್ಣ ಚರಂತಿಮಠ, ಪ್ರಭಾಕರ ಕೋರೆ, ಹಾಲಪ್ಪ ಆಚಾರ್, ಸೊಗಡು ಶಿವಣ್ಣ, ಶಂಕರ ಪಾಟೀಲಮುನೇನಕೊಪ್ಪ, ಯು.ಬಿ.ಬಣಕಾರ, ಅರವಿಂದ ಬೆಲ್ಲದ, ಲಿಂಗಮೂರ್ತಿ ಹೊಸದುರ್ಗ, ಮಹಾಂತೇಶ ಪಾಟೀಲ ಹಾಗೂ ವಿಜಯಲಕ್ಷ್ಮೀ ಈಶ್ವರಪ್ಪ ಬಾಳೆಕುಂದ್ರಿಯವರನ್ನ ನೇಮಕ ಮಾಡಲಾಗಿದೆ.

ಈ ಬಗ್ಗೆ ಅಧಿಕೃತವಾದ ಅಧಿಸೂಚನೆಯನ್ನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀಪತಿ ಪಿ.ಕೆ.ಯವರು ರಾಜ್ಯಪಾಲರ ಆದೇಶದ ಅನುಸಾರ ಆದೇಶ ಹೊರಡಿಸಿದ್ದಾರೆ.

ಲಿಂಗಾಯತ-ವೀರಶೈವ ಅಭಿವೃದ್ಧಿ ಮಂಡಳಿಗೆ ನವಲಗುಂದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹಾಗೂ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದವರಿಗೆ ನಿರ್ದೇಶಕ ಮಾಡುವ ಮೂಲಕ ಜಿಲ್ಲೆಯಲ್ಲಿ ಇಬ್ಬರಿಗೆ ಅವಕಾಶವನ್ನ ನೀಡಲಾಗಿದ್ದು, ಹಿರಿಯರಾದ ಶಂಕರ ಪಾಟೀಲಮುನೇನಕೊಪ್ಪರವರ ಮಾರ್ಗದರ್ಶನವೂ ಅರವಿಂದ ಬೆಲ್ಲದವರಿಗೆ ದೊರೆಯಲಿದೆ.


Spread the love

Leave a Reply

Your email address will not be published. Required fields are marked *

You may have missed