Posts Slider

Karnataka Voice

Latest Kannada News

ಸರಕಾರದ ತಪ್ಪಿನಿಂದಲೇ 72 ಶಿಕ್ಷಕರು ಸಾವಿಗೀಡಾಗಿದ್ದು- ಬಸವರಾಜ ಹೊರಟ್ಟಿ ಆಕ್ರೋಶ

1 min read
Spread the love

ಹುಬ್ಬಳ್ಳಿ; ರಾಜ್ಯದಲ್ಲಿ ವಿದ್ಯಾಗಮ ಯೋಜನೆಯಿಂದಲೇ 72 ಶಿಕ್ಷಕರು ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. 250ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೋನಾ ತಗುಲಿದೆ. ಇದಕ್ಕೇಲ್ಲ ಕಾರಣವಾಗಿದ್ದು ಸರಕಾರವೇ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರವ್ಯಕ್ತಪಡಿಸಿದರು.

ನಗರದಲ್ಲಿಂದು ಮಾತನಾಡಿದ ಬಸವರಾಜ ಹೊರಟ್ಟಿ, ನಾನು ಮೊದಲೇ ಹೇಳಿದ್ದೆ. ಯಾವುದೇ ಕಾರಣಕ್ಕೂ 1ರಿಂದ 8 ತರಗತಿವರೆಗೆ ಶಾಲೆಗಳನ್ನ ಆರಂಭಿಸುವುದು ಬೇಡವೇ ಬೇಡ ಎಂದು ಮೊದಲೇ ಹೇಳಿದ್ದೆ. ಆದರೆ, ಸರಕಾರ ವಿದ್ಯಾಗಮ ಯೋಜನೆಯ ಅನುಷ್ಟಾನದಲ್ಲಿ ಮುಳುಗಿದ್ದರು. ಇದೇ ಕಾರಣಕ್ಕೆ ಇಷ್ಟೊಂದು ಶಿಕ್ಷಕರು ಜೀವ ಕಳೆದುಕೊಂಡರು ಎಂದು ಹೇಳಿದರು.

ಸರಕಾರ ಈಗ ಪದವಿ ಕಾಲೇಜುಗಳನ್ನ ಆರಂಭಿಸುವುದು ಒಳ್ಳೆಯದು. 9ನೇ ತರಗತಿಯಿಂದಲೂ ಆರಂಭ ಮಾಡಬೇಕು. ಈ ಬಗ್ಗೆಯೂ ಸರಕಾರಕ್ಕೆ ವಿವರವಾದ ಮಾಹಿತಿಯನ್ನ ಕೊಟ್ಟಿದ್ದೇವೆ. ಆ ಥರಾ ಶಿಕ್ಷಣ ಆರಂಭಿಸಿದರೇ, ಯಾವುದೇ ತೊಂದರೆಯಾಗಲಾರದು ಎಂದು ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

1ರಿಂದ 8ನೇ ತರಗತಿಯನ್ನ ಆರಂಭಿಸುವುದು ಒಳಿತಲ್ಲ ಎಂಬುದನ್ನ ಒತ್ತಿ ಒತ್ತಿ ಹೇಳಿದ ಹೊರಟ್ಟಿಯವರು, ಸರಕಾರ ಒಂದಿಷ್ಟು ತೀರ್ಮಾನಗಳನ್ನ ಗಡಿಬಿಡಿಯಿಂದ ತೆಗೆದುಕೊಳ್ಳುವುದು ಬೇಡ ಎಂದು ಸಲಹೆ ನೀಡಿದರು.


Spread the love

Leave a Reply

Your email address will not be published. Required fields are marked *