ಸೂರ್ಯ ಅಗ್ರೋ-ವಿಜಯಲಕ್ಷ್ಮೀ ಸೀಡ್ಸಗೆ ಬೀಗ- ಮೂರುವರೆ ಲಕ್ಷದ ಕೀಟನಾಶಕ ವಶ
1 min readಹುಬ್ಬಳ್ಳಿ: ನಗರದ ಸೂರ್ಯ ಅಗ್ರೋ ಏಜೆನ್ಸೀಜ್ ಮತ್ತು ವಿಜಯಲಕ್ಷ್ಮೀ ಸೀಡ್ಸ್ ಕಾರ್ಪೋರೇಷನ್ ಮೇಲೆ ದಾಳಿ ಮಾಡಿರುವ ಕೃಷಿ ಅಧಿಕಾರಿಗಳು, ಇಲಾಖೆಯಿಂದ ಪರವಾನಿಗೆ ಮತ್ತು ನೋಂದಣಿಯಿಲ್ಲದ ಲಕ್ಷಾಂತರ ರೂಪಾಯಿ ಮೌಲ್ಯದ ಕೀಟನಾಶಕವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಕೃಷಿ ಇಲಾಖೆಯ ಕೀಟನಾಶಕಗಳ ಕಾಯ್ದೆ ಉಲ್ಲಂಘಿಸಿ ನೈಟ್ರೋಜನ ಅಂಶ ಹೊಂದಿರುವ ಸ್ಮಾರ್ಟ್ ಹಾಗೂ 169 ಜಿ ಅಗ್ರೋ ಕೀಟನಾಶಕವನ್ನ ದಾಸ್ತಾನು ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ 133.750 ಲೀಟರ್ ಕೀಟನಾಶಕವನ್ನ ವಶಕ್ಕೆ ಪಡೆಯಲಾಗಿದೆ.ಈ ಕುರಿತು ಹೇಳಿಕೆ ನೀಡಿರುವ ಸಹಾಯಕ ಕೃಷಿ
ನಿರ್ದೇಶಕ ಆರ್.ಎ.ಅಣಗೌಡರ, ಅಕ್ರಮ ದಾಸ್ತಾನು ಮಾಡುವುದು ಕೀಟನಾಶಕ ಕಾಯಿದೆಯ ಪ್ರಕಾರ ಅಪರಾಧವಾಗಿದೆ. ಹೀಗಾಗಿ ಸಂಸ್ಥೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದೆಂದು ಹೇಳಿದರು.
ಬೆಳಗಾವಿ ವಿಭಾಗದ ಜಾರಿ ದಳದ ಜಂಟಿ ನಿರ್ದೇಶಕ ಜೆಲಾನಿ ಮೊಕಾಸಿ, ಧಾರವಾಡ ಕೃಷಿಯ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ, ವಿ.ಬಿ.ಪುರಾಣಿಕ, ರಾಘವೇಂದ್ರ ಬಮ್ಮಿಗಟ್ಟಿ ಸೇರಿದಂತೆ ಹಲವರು ದಾಳಿಯಲ್ಲಿ ಭಾಗವಹಿಸಿ, ದಾಸ್ತಾನನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.