ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಬೆಂಕಿ ಹಚ್ಚಿದ ಸಂಜೀವ ಡುಮ್ಮಕನಾಳ…!
1 min readಹುಬ್ಬಳ್ಳಿ: ಕೇಂದ್ರ ಸರಕಾರದ ರೈತ ನೀತಿಯನ್ನ ವಿರೋಧಿಸಿ ಕರೆದಿರುವ ಭಾರತ ಬಂದ್ ಗೆ ಅವಳಿನಗರದಲ್ಲಿ ಬೆಳಿಗ್ಗೆಯಿಂದಲೇ ಪೂರ್ಣ ಪ್ರಮಾಣದ ಬೆಂಬಲ ದೊರಕಿದ್ದು, ವಾಣಿಜ್ಯನಗರಿಯಲ್ಲಿ ಹೋರಾಟಗಾರರು ಬೆಂಕಿ ಹಚ್ಚಿ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.
ಸಂಗ್ರಾಮ ಸೇನೆಯ ಮುಖ್ಯಸ್ಥ ಸಂಜೀವ ಡುಮ್ಮಕನಾಳ ನೇತೃತ್ವದಲ್ಲಿ ಆರಂಭಗೊಂಡಿರುವ ರೈತರ ಬೆಂಬಲಾರ್ಥ ಹೋರಾಟಕ್ಕೆ ಬೆಂಬಲ ದೊರಕಿದ್ದು, ಬಂದ್ ನಿರ್ಲಕ್ಷ್ಯ ಮಾಡಿ ಸಂಚರಿಸುತ್ತಿರುವ ಬಸಗಳ ಮುಂದೆಯೂ ಕೂಡಾ ಕುಳಿತು ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಆಗಮಿಸಿದ ಪೊಲೀಸರು, ಬಸ್ ತಡೆಯದಂತೆ ಮನವೊಲಿಸುವ ಪ್ರಯತ್ನ ಮಾಡಿದರು. ಕೇಂದ್ರ ಸರಕಾರ ರೈತ ವಿರೋಧಿ ನೀತಿಗಳನ್ನ ಜಾರಿಗೆ ತರಲು ಹೊರಟಿದೆ. ಇದನ್ನ ರದ್ದು ಮಾಡುವವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಸುತ್ತಲೇ ಕೇಂದ್ರ ಸರಕಾರದ ವಿರುದ್ಧ ಘೋಷಣೆಯನ್ನ ಕೂಗುತ್ತಿದ್ದರು.
ಹಳೇ ಬಸ್ ನಿಲ್ದಾಣದ ಮುಂದೆ ಬಸ್ ಹೊರಗೆ ಹೋಗದಂತೆ ಪ್ರತಿಭಟನೆ ಆರಂಭಗೊಂಡಿದೆ. ಬೆಳಗಿನಿಂದಲೇ ಚುರುಕಿನಿಂದ ಹೋರಾಟ ಆರಂಭಗೊಂಡಿದ್ದರಿಂದ ಹುಬ್ಬಳ್ಳಿಯಲ್ಲಿ ಬಂದ್ ವಾತವಾರಣ ಮೂಡಿದೆ. ಹೆಚ್ಚಿನ ಪೊಲೀಸ್ ಬಂದೋಬಸ್ತನ್ನ ಕೂಡಾ ನಿಯೋಜನೆ ಮಾಡಲಾಗಿದೆ.